Ad imageAd image

ನಿರೀಕ್ಷೆಗೂ ಮೀರಿ ನೋವು ಭಾರತವನ್ನ ಕಾಡಲಿದೆ : ಕೋಡಿ ಶ್ರೀ ಭಯಾನಕ ಭವಿಷ್ಯ

Bharath Vaibhav
ನಿರೀಕ್ಷೆಗೂ ಮೀರಿ ನೋವು ಭಾರತವನ್ನ ಕಾಡಲಿದೆ : ಕೋಡಿ ಶ್ರೀ ಭಯಾನಕ ಭವಿಷ್ಯ
Swamiji
WhatsApp Group Join Now
Telegram Group Join Now

ಹಾಸನ : ಪ್ರಪಂಚದ ಆಗು-ಹೋಗುಗಳ ಬಗ್ಗೆ ಸ್ಪೋಟಕ ಭವಿಷ್ಯ ನುಡಿಯುವುದರಲ್ಲಿ ಕೋಡಿಶ್ರೀಗಳು ಯಾವಾಗಲು ಮುಂದು ಇದೀಗ ಮತ್ತೆ ಸ್ಪೋಟಕ ಭವಿಷ್ಯ ನುಡಿದಿದ್ದು, ಸಿಎಂ ಸಿದ್ದರಾಮಯ್ಯ ಬಗ್ಗೆ ಭವಿಷ್ಯ ಹೇಳಿದ ಸ್ವಾಮೀಜಿಗಳು ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.

ಮುಂದಿನ 6 ತಿಂಗಳ ಬಗ್ಗೆ ಭವಿಷ್ಯ ಸಂಸದ ವಿ ಸೋಮಣ್ಣ ಅವರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಭವಿಷ್ಯ ನುಡಿದಿದ್ದು, ನಿರೀಕ್ಷೆಗೂ ಮೀರಿ ನೋವು ಭಾರತವನ್ನ ಕಾಡಲಿದೆ ಎಂದು ಹೇಳಿದ್ದಾರೆ.
ಅದರ ಜೊತೆಗೆ ರಾಜಕೀಯದಲ್ಲಿ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾವಣೆ ಆಗಲಿದೆ ಎಂದು ಭವಿಷ್ಯ ಹೇಳಿದ್ದಾರೆ.

ಸೋಳೆಯಾ ಮಗನುಟ್ಟಿ, ಆಳುವನು ಮುನಿಪುರವ. ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು ಎಂದು ಗೂಡಾರ್ಥವಾಗಿ ಹೇಳಿದ್ದು, ಇದರ ಅರ್ಥ ಮುಂದಿನ ದಿನಗಳಲ್ಲಿ ಹೇಳುವುದಾಗಿ ಕುತೂಹಲ ಹುಟ್ಟಿಸಿದ್ದಾರೆ.

ಸಿಎಂ ಬಗ್ಗೆ ಭವಿಷ್ಯ ನುಡಿದ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಭವಿಷ್ಯ ಹೇಳಿದ ಸ್ವಾಮೀಜಿಗಳು ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಬಾರಿ ಮಳೆ ಹೆಚ್ಚಾಗುವುದರಿಂದ ಜಲಸ್ಫೋಟ ಉಂಟಾಗುತ್ತದೆ.
ಇದರಿಂದ ಸ್ವಲ್ಪ ಸಮಸ್ಯೆ ಆಗಬಹುದು.

ದೇಶದಲ್ಲಿ ಮೇಘ ಸ್ಪೋಟ ಆಗಲಿದ್ದು, ಯುದ್ಧ ಇದ್ದು, ಕಾರ್ಮೋಡ ಕವಿಯಲಿದೆ ಎಂದು ಹೇಳಿದ್ದಾರೆ. ರಾಜ್ಯ ಹಾಗೂ ದೇಶಕ್ಕೆ ಕಂಟಕ ಇದ್ದು, ಕೆಲ ಜನರು ಬಲಿಯಾಗಲಿದ್ದಾರೆ ಎಂದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!