Ad imageAd image

‘ಸದೃಢ ದೇಹದಲ್ಲಿ ಸದೃಢ ಮನಸ್ಸು ಗಟ್ಟಿಗೊಳಿಸುವಲ್ಲಿ ಯೋಗ ಅತಿ ಅವಶ್ಯಕ,

Bharath Vaibhav
‘ಸದೃಢ ದೇಹದಲ್ಲಿ ಸದೃಢ ಮನಸ್ಸು ಗಟ್ಟಿಗೊಳಿಸುವಲ್ಲಿ ಯೋಗ ಅತಿ ಅವಶ್ಯಕ,
WhatsApp Group Join Now
Telegram Group Join Now

 

ಕಲಘಟಗಿ : ಸ್ಥಳೀಯ ಗುಡ್ ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ಸಂಯೋಗದಲ್ಲಿ ಇಂದು ವಿಶ್ವ ಯೋಗ ದಿನ ಅದ್ದೂರಿಯಾಗಿ ವಿವಿಧ ಯೋಗ ಆಸನಗಳನ್ನು ಮಾಡುವುದರ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ನಮ್ಮ ಗುಡ್ ನ್ಯೂಸ್ ಸಂಸ್ಥೆಯ ಖಜಂಚಿಗಳಾದ ರೇ. ಬ್ರ. ರೀ ದ ಅರುಣಾನಂದಮ್ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ಯೋಗದಿಂದಾಗುವ ಲಾಭಗಳು ಯೋಗಾಸನ ನಮ್ಮ ದೇಹವನ್ನು ಸದೃಢವನ್ನಾಗಿಸಿ, ಅನೇಕ ರೋಗಗಳನ್ನ ಹೋಗಲಾಡಿಸುತ್ತದೆ ಎಂಬ ವಿಚಾರಗಳನ್ನ ವ್ಯಕ್ತ ಪಡಿಸಿದರು.

ಪ್ರಾಚಾರ್ಯರಾದ ಶ್ರೀಮತಿ ನವೀನಾ ರೆಡ್ಡರ, ಯೋಗದ ಅರಿವು ಕುರಿತು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಸಂಯೋಜನಾಧಿಕಾರಿ ಜಾಫರ್ ಬಾವನವರ, ಹಾಗೂ ಮಹಾವಿದ್ಯಾಲಯದ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!