Ad imageAd image

ಉತ್ತಮ ಶಿಕ್ಷಣದ ಜೊತೆಗೆ ಯೋಗಾಭ್ಯಾಸವು ಇರಬೇಕು: ಅವಿನಾಶ್ ಬೊರಂಚಿ

Bharath Vaibhav
ಉತ್ತಮ ಶಿಕ್ಷಣದ ಜೊತೆಗೆ ಯೋಗಾಭ್ಯಾಸವು ಇರಬೇಕು: ಅವಿನಾಶ್ ಬೊರಂಚಿ
WhatsApp Group Join Now
Telegram Group Join Now

ಸೇಡಂ: ಶ್ರೀ ವಿಶ್ವಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಅವಿನಾಶ್ ಬೋರ್ಂಚಿ ಪ್ರಜಾವಾಣಿ ಪತ್ರಿಕೆ ವರದಿಗಾರರು ಸೇಡಂ ರವರು ಸಸಿಗೆ ನೀರು ಎರೆಯುವುದರ ಮುಖಾಂತರ ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಈರಣ್ಣ ಗೌಡ ರೆಮಣಿ ಮತ್ತು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ವಿಶೇಷ ಉಪನ್ಯಾಸಕರಾಗಿ ಸಂಸ್ಥೆಯ ಪ್ರಾಚಾರ್ಯರಾಗಿರುವ ದುಂಡಪ್ಪ ಹಿಪ್ಪರಗಿ ಅವರು ಮತ್ತು ಹಿರಿಯ ಉಪನ್ಯಾಸಕರಾಗಿರುವ ಮಹೇಶ್ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗದ ಕುರಿತು ಮತ್ತು ಮಕ್ಕಳಿಗೆ ಆರೋಗ್ಯ ವಿಷಯದ ಕುರಿತು ಸಹವಿಸ್ತಾರವಾಗಿ ಪ್ರಾಚಾರ್ಯರಾಗಿರುವ ದುಂಡಪ್ಪ ಹಿಪ್ಪರಿಗೆ ರವರು ಮಕ್ಕಳ ಮಾನಸಿಕ ಮಟ್ಟಕ್ಕೆ ಅರ್ಥವಾಗುವ ರೀತಿಯಲ್ಲಿ ತುಂಬಾ ಚೆನ್ನಾಗಿ ಉಪನ್ಯಾಸಮಾಲಿಕೆಯನ್ನು ನೀಡಿದರು ಮತ್ತು ಪತ್ರಕರ್ತ ಅವಿನಾಶ್ ಬೋರಂಚಿ ಅವರು ಶಿಕ್ಷಣದ ಜೊತೆಗೆ ಮಕ್ಕಳಿಗೆ ಯೋಗ ಅಭ್ಯಾಸ ಕುರಿತು ಪ್ರತಿಯೊಬ್ಬರಿಗೂ ತಿಳಿ ಹೇಳಿದರೆ ಮಕ್ಕಳ ಆರೋಗ್ಯದಲ್ಲಿ ತುಂಬಾ ಉತ್ತಮವಾದ ಪ್ರಯೋಜನಕಾರಿ ಆಗಿ ಉತ್ತಮ ಶಿಕ್ಷಣ ಜೊತೆಗೆ ಮಕ್ಕಳು ಆರೋಗ್ಯವಂತರಾಗಿರಲು ಸಾಧ್ಯ ಎಂದು ತಿಳಿ ಹೇಳಿದರು.

ಜೊತೆಗೆ ಈರಣ್ಣ ಗೌಡ ರೆಮಣಿಯವರು ಮಕ್ಕಳು ಮುಂದಿನ ಪ್ರಜೆಗಳು ನಾಡಿನ ನಾಯಕರಾಗಿ ದೇಶಕ್ಕೆ ಒಂದು ಬುತ್ತಿಯಾಗಿ ತಂದೆ ತಾಯಿಗೆ ಶಕ್ತಿಯಾಗಿ ನಿಲ್ಲಲು ಸ್ಪೂರ್ತಿ ದಾಯಕವಾದ ಜ್ಞಾನವನ್ನು ಮಕ್ಕಳಿಗೆ ನೀಡುತ್ತಾ ಯೋಗ ಅಭ್ಯಾಸವು ಪ್ರತಿಯೊಬ್ಬ ಮಗುವಿನಲ್ಲಿ ನೀಡಿದೆ ಆದರೆ ಬಲಿಷ್ಠವಾದ ಬದುಕು ಸುಗಮವಾದ ಬದುಕು ಕಟ್ಟಿಕೊಂಡು ಶೈಕ್ಷಣಿಕವಾಗಿರತಕ್ಕಂತಹ ಜ್ಞಾನವನ್ನು ಮಕ್ಕಳಿಗೆ ವೃದ್ಧಿಯಾಗುವುದಕ್ಕೆ ಸಾಧ್ಯ ಎಂದು ಉತ್ತಮ ರೀತಿಯಲ್ಲಿ ಮಾತಾಡಿದರು.

ಮಹೇಶ್ ಪಾಟೀಲ್ ರವರು ಮಕ್ಕಳು ಪ್ರತಿದಿನ 10 -15 ನಿಮಿಷಗಳ ಕಾಲ ಯೋಗವನ್ನು ಮಾಡಿದೆ ಆದರೆ ಉತ್ತಮವಾದ ಆರೋಗ್ಯವನ್ನು ಪಡೆದುಕೊಂಡು ಸದೃಢವಾದ ಬದುಕನ್ನು ನಡೆಸುವುದಕ್ಕೆ ಸಾಧ್ಯ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಮಕ್ಕಳು ಭಾಗಿಯಾಗಿ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮತ್ತು ಸಿಬ್ಬಂದಿ ವರ್ಗದವರು ಮುದ್ದು ಮಕ್ಕಳು ಭಾಗಿಯಾಗಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!