Ad imageAd image

ಇಂದಿನಿಂದ ವಿಶ್ವ ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ

Bharath Vaibhav
ಇಂದಿನಿಂದ ವಿಶ್ವ ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ
WhatsApp Group Join Now
Telegram Group Join Now

ಒಡಿಶಾ : ವಿಶ್ವ ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಇಂದಿನಿಂದ ಪ್ರಾರಂಭವಾಗಲಿದೆ. ಇಂದಿನಿಂದ ಹನ್ನೊಂದು ದಿನಗಳ ಕಾಲ ನಡೆಯುವ ಈ ಸಂಭ್ರಮದಲ್ಲಿ 15 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯದೆ.

ಮೂರು ರಥಗಳಲ್ಲಿ ಜಗನ್ನಾಥ ಸ್ವಾಮಿ, ಅವನ ಸೋದರ ಬಲಭದ್ರ ಹಾಗೂ ಸೋದರಿ ಸುಭದ್ರಾ ದೇವಿಯ ಮೂರ್ತಿಗಳನ್ನು ಇರಿಸಿ ಮೆರವಣಿಗೆ ಮಾಡಲಾಗುತ್ತದೆ.ಗುಂಡೀಚಾ ದೇಗುಲಕ್ಕೆ ತೆರಳಲಿರುವ ಈ ಮೂರು ರಥಗಳು ಅಲ್ಲಿ ಒಂದು ವಾರ ಕಳೆದು ಬಳಿಕ ಹಿಂದಿರುಗಲಿವೆ.

ಈ ವೈಭವದ ರಥಯಾತ್ರೆಗೆ ಭಾರತದ ಹಲವು ಮೂಲೆಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಭಕ್ತಾದಿಗಳು ಆಗಮಿಸಲಿದ್ದಾರೆ. ಜು. 8 ರಂದು ರಥಯಾತ್ರೆ ಮುಕ್ತಾಯವಾಗಲಿದೆ.

ರಥಯಾತ್ರೆಯ ಭದ್ರತೆಗೆ 10 ಸಾವಿರಕ್ಕೂ ಹೆಚ್ಚು ಪೊಲೀಸರು, ಸೇನೆ, ಅರೆಸೇನೆಯ ಪಡೆಯ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು,ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!