Ad imageAd image

ಸದಲಗಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಸ್ಲ್ಯಾಬ್ ಕಾಮಗಾರಿಗೆ ಚಾಲನೆ

Bharath Vaibhav
ಸದಲಗಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಸ್ಲ್ಯಾಬ್ ಕಾಮಗಾರಿಗೆ ಚಾಲನೆ
WhatsApp Group Join Now
Telegram Group Join Now

——————–ಗ್ರಾಮೀಣ ಪ್ರದೇಶದಲ್ಲಿ ಬಡ ರೋಗಿಗಳ ಅನುಕೂಲಕ್ಕಾಗಿ ಆಸ್ಪತ್ರೆ: ಡಾ.ಇರ್ಫಾನ್ ಬೇಗ್

ನಿಪ್ಪಾಣಿ:   ಗ್ರಾಮೀಣ ಪ್ರದೇಶದಲ್ಲಿಯ ಬಡ ರೋಗಿಗಳಿಗೆ ಅತ್ಯಲ್ಪ ದರದಲ್ಲಿ ಉಪಚಾರ,ಚಿಕಿತ್ಸೆ ದೊರೆಯಬೇಕೆಂಬ ಉದ್ದೇಶದಿಂದ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಅತ್ಯಾಧುನಿಕ 15 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ಡಾಕ್ಟರ್ ಇರ್ಫಾನ್ ಬೇಗ ತಿಳಿಸಿದರು.

ಅವರು ಸದಲಗಾ ಪಟ್ಟಣದ ದರ್ಗಾ ಕಮಿಟಿಯ ಆಶ್ರಯದಲ್ಲಿ 40 ಲಕ್ಷ ರೂಪಾಯಿಗಳ ವೆಚ್ಚ ದಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಯ ಕಟ್ಟಡದ ಸ್ಲಾಬ್ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಪ್ರಾರಂಭದಲ್ಲಿ ವಿಧಿಪೂರ್ವಕ ಲಿಂಗಾಯಿತ ಸ್ವಾಮಿಗಳಾದ ಸಂತೋಷ ಹಿರೇಮಠ ಕಾರದಗಾ ಗ್ರಾಮದ ಅಪ್ಪಾ ಮಲಂಗ ಬಾಬಾ, ಅವರ ಅಮೃತ ಹಸ್ತದಿಂದ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಡಾಕ್ಟರ್ ಇರ್ಫಾನ್ ಬೇಗ ಹಾಗೂ ಪುರಸಭೆ ಸದಸ್ಯ ಅತ್ತಾವುಲ್ಲಾ ಮುಜಾವರ್ ಮಾತನಾಡಿದರು. ಸ್ಲ್ಯಾಬ್ ಕಾಮಗಾರಿ ಪೂಜಾ ಸಮಾರಂಭದಲ್ಲಿ ಪುರಸಭಾಧ್ಯಕ್ಷ ಬಸವರಾಜ್ ಗುಂಡಕಲ್ಲೇ ಮಾಜಿ ಪುರಸಭಾಧ್ಯಕ್ಷ ಅಭಿಜಿತ್ ಪಾಟೀಲ್ ಉದಯ್ ಬದನೆಕಾಯಿ ಚಾಂದ್ ಸನದಿ ಆನಂದ ಪಾಟೀಲ್ ಸಲೀಂ ಮುಜಾವರ್ ಚೇತನ್ ಪಾಟೀಲ್ ಅನಿರುದ್ಧ ಪಾಟೀಲ್ ಅಜರುದ್ದೀನ್ ಶೇಖಜಿ ದರೆಪ್ಪಾ ಹವಾಲ್ದಾರ್ ರುತುರಾಜ ಪಾಟೀಲ ಮಹದೇವ್ ಮಧಾಳೆ ಗುಲ್ಲು ಫರಾಸ್ ,ಪ್ರಶಾಂತ ಕರಂಗಳೇ ರಾಜು ಅಮೃತಸಮಣ್ಣವರ ಸಲೀಮ್ ಬೇಗ್ ಅರುಣ ಬೋನೆ, ಶಕೀಲ ಬೇಗ್ ಸದಾನಂದ ಪೂಜಾರಿ ಸೇರಿದಂತೆ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.

ವರದಿ: ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!