Ad imageAd image

ನೂತನ ತಹಶೀಲ್ದಾರ ಪಮ್ಮಾರಗೆ ಇಳಕಲ್ ನಗರ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸ್ವಾಗತ ಸನ್ಮಾನ

Bharath Vaibhav
ನೂತನ ತಹಶೀಲ್ದಾರ ಪಮ್ಮಾರಗೆ ಇಳಕಲ್ ನಗರ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸ್ವಾಗತ ಸನ್ಮಾನ
WhatsApp Group Join Now
Telegram Group Join Now

ಇಳಕಲ್ : ಇಳಕಲ್ ತಾಲೂಕಿನ ನೂತನ ತಹಶೀಲ್ದಾರ ರಾಗಿ ಆಗಮಿಸಿರುವ ಅಮರೇಶ ಪಮ್ಮಾರ ಅವರಿಗೆ ಇಳಕಲ್ ನಗರ ಅಭಿವೃದ್ಧಿ ಹೋರಾಟ ಸಮಿತಿ ಮತ್ತು ಪತ್ರಕರ್ತರ ಬಳಗದಿಂದ ಮತ್ತು ದೃಶ್ಯ ಮಾಧ್ಯಮ ಮಿತ್ರರಿಂದ ಸನ್ಮಾನಿಸಿ ಸ್ವಾಗತಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ನಗರ ಹೋರಾಟ ಸಮಿತಿ ಅಧ್ಯಕ್ಷ ಸಿ,ಸಿ, ಚಂದ್ರಪಟ್ಟಣವರು ನೂತನ ತಹಶೀಲ್ದಾರರಾಗಿ ಆಗಮಿಸಿದ ಅಮರೇಶ ಪಮ್ಮಾರವರಿಗೆ ಇಳಕಲ್ ನಗರ ಹೋರಾಟ ಸಮಿತಿಯಿಂದ ಮತ್ತು ಪತ್ರಕರ್ತರ ಬಳಗದ ವತಿಯಿಂದ ಮತ್ತು ದೃಶ್ಯ ಮಾಧ್ಯಮ ಮಿತ್ರರ ಇಳಕಲ್ ಜನತೆ ಪರವಾಗಿ ಸ್ವಾಗತಿಸುತ್ತಾ ಆಫೀಸಿನ ಕೊಂದು ಕೊರತೆಗಳಾದ ಬಿಎಸ್ಎನ್ಎಲ್ ಸರ್ವರ್ ಸಮಸ್ಯೆ ಮತ್ತು ಕರೆಂಟ್ ಹೋದರೆ ಯುಪಿಎಸ್ ಸಮಸ್ಯೆ ಮತ್ತು ಆಫೀಸಿಗೆ ಬಂದಂತ ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿರಿ ಎಂದು ಹೇಳಿದರು.
ನಂತರ ಮಾತನಾಡಿದ ಬಸವರಾಜ ಮಠದವರು ಅವರು ಸ್ವಾಗತ ಕೋರಿ ಅಭಿನಂದನೆಗಳು ಸಲ್ಲಿಸಿ ಇಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕಿರಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಇಳಕಲ್ ನಗರ ಹೋರಾಟ ಸಮಿತಿ ಸದಸ್ಯರಾದ ಅಹಮದ್ ಕಂಡಕ್ಟರ್ ಬಾಗವಾನ, ಮತ್ತು ಪತ್ರಕರ್ತ ಬಳಗದವರು ಮತ್ತು ದೃಶ್ಯ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!