Ad imageAd image

ಚಾಮರಾಜನಗರ: ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ 

Bharath Vaibhav
ಚಾಮರಾಜನಗರ: ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ 
WhatsApp Group Join Now
Telegram Group Join Now

ಚಾಮರಾಜನಗರ: ಜಿಲ್ಲೆಯ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಿದ ಸಂದರ್ಭ ಕಂಡು ಬಂದಿತ್ತು.

ನಗರದ ಹಿರಿಯ ಸಿವಿಲ್ ನ್ಯಾಯಾಲಯದ ಮೂಕದ್ದಮೆ ಸಂಖ್ಯೆ 31/2025 ರ ಅರ್ಜಿದಾರ ನಾಗೇಂದ್ರ ಮತ್ತು ಪುಷ್ಪಲತಾ ದಂಪತಿಗಳ ವಿಚ್ಛೇದನ ಪ್ರಕರಣ ಹಾಗೂ ಪ್ರಧಾನ ಸಿವಿಲ್ ನ್ಯಾಯಾಲಯದ ಮೂಕದ್ದಮೆ ಸಂಖ್ಯೆ 52/2025 ರ ಅರ್ಜಿದರದ ಸುಮಿತ್ರ L. ಮತ್ತು ವೆಂಕಟೇಶ ನಾಯಕ ದಂಪತಿಗಳ ಜೀವನಾಂಶ ಕೊರಿ ಸಲ್ಲಿಸಿದ ಅರ್ಜಿಯ ಪ್ರಕರಣಕ್ಕೆ ಸಂಬಂದಿಸಿದಂತೆ
ಇಬ್ಬರು ಕಕ್ಷೀದಾರರನ್ನು ಮನವೂಲಿಕೆಯ ಪ್ರಯತ್ನದಲ್ಲಿ ಸಪಲತೆ. ಇಬ್ಬರನ್ನು ಮತ್ತೆ ಒಗ್ಗೊಡಿ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದ ಸಂದರ್ಭ ಲೋಕ್ ಅದಾಲತ್ ನಲ್ಲಿ ವಿಶೇಷವಾಗಿತ್ತು.

ಹಲವು ವರ್ಷಗಳಿಂದಲೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ವ್ಯಾಜ್ಯ ಪೂರ್ವ ಹಲವು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ಲೋಕ್ ಅದಾಲತ್ ನಡೆಯಿತು.

ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಪ್ರಭಾವತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ, ಪ್ರಧಾನ ಕಾರ್ಯದರ್ಶಿ ದೊಡ್ಡಮೋಳೆ ರಂಗಸ್ವಾಮಿ ಸೇರಿದಂತೆ ಇನ್ನೀತರೆ ವಕೀಲರು ಭಾಗಿಯ್ಗಿದ್ದರು.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!