ಮೊಳಕಾಲ್ಮೂರು :ವೀರೇಂದ್ರ ಹೆಗಡೆಯವರ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ಅನೇಕ ಬಡ ಕುಟುಂಬಗಳಿಗೆ ತಮ್ಮ ಜೀವನ ಕಟ್ಟಿಕೊಳ್ಳಲು ಅನುಕೂಲವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ತಾಲೂಕು ಯೋಜನೆ ಅಧಿಕಾರಿ ಶಶಿಧರ್ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಭಾನುವಾರ ಶ್ರೀ ಲಕ್ಷ್ಮಿ ಸ್ವಸಹಾಯ ಸಂಘದ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು, ಈ ಸಂಘದಿಂದ ಅನೇಕ ಬಡ ಮಕ್ಕಳು ಉನ್ನತ ವ್ಯಾಸಂಗ ಮಾಡಿ ತಮ್ಮ ಜೀವನ ರೂಪಿಸಿಕೊಂಡಿದ್ದಾರೆ ಸಂಘದ ಕಾರ್ಯಕರ್ತರಿಗೆ ಪ್ರತಿನಿಧಿಗಳಿಗೆ ತಾಳ್ಮೆ ಕಠಿಣ ಪರಿಶ್ರಮ ಬಹಳ ಮುಖ್ಯ ಈ ಗುಣಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಬೇಕಿದೆ ಎಂದರು, ಅದೇ ರೀತಿ ತಂದೆ ತಾಯಿಯ ಸ್ವರೂಪ ನಮ್ಮ ಧರ್ಮಸ್ಥಳ ಸಂಘ ಸುಸಾಯ ಸಂಘಗಳು ಅವುಗಳನ್ನು ನಿರಂತರವಾಗಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಎಲ್ಲಾ ಸಂಘದವರು ತಯಾರು ಮಾಡಿಕೊಂಡು ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು ಈ ಸಂಘವು 13 ವರ್ಷ ಪೂರೈಸಿದ್ದು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ ಇದೇ ತರಹ ಈ ಸಂಘವು ಅನೇಕ ವರ್ಷಗಳು ಪೂರೈಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ವಲಯ ಮೇಲ್ವಿಚಾರಕರಾದ ಸಿದ್ದಯ್ಯ ಮಾತನಾಡಿ ತಾಲೂಕಿನ ಈ ಸಂಘವು ತಾಲೂಕಿನ 3000 ಸಂಘಗಳಿಗೆ ಮಾದರಿಯಾಗಿದೆ ಯಾವುದೇ ಸಂಘ ನಿರಂತರ ಮತ್ತು ಸ್ಥಿರವಾಗಿ ಇರಬೇಕೆಂದರೆ ಒಂದು ನಿರ್ದಿಷ್ಟವಾದ ಗುರಿ ಮತ್ತು ಕನಸು ಕಟ್ಟಿಕೊಂಡಿರಬೇಕು ಸಂಘದ ಪರಿಕಲ್ಪನೆ ಸಂಘದ ನಿಯಮಗಳು ಬಗ್ಗೆ ಅರಿವು ಇರಬೇಕು ಸದಸ್ಯರಲ್ಲಿ ಹೊಂದಾಣಿಕೆ ಪ್ರೀತಿ-ವಿಶ್ವಾಸದಿಂದ ಒಂದೇ ಮನೋಭಾವ ಉಳ್ಳವರು ಇಂತಹ ಉತ್ತಮ ಗುಣಲಕ್ಷಣಗಳನ್ನು ನಿಮ್ಮಲ್ಲಿರುವುದರಿಂದ ತಾಲೂಕಿನಲ್ಲಿ ಮಾದರಿ ಸಂಘವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯ ಲೀಲಾವತಿ ಮಾತನಾಡಿ ಈ ಸಂಘದಿಂದ ನಾನು ಉತ್ತಮ ಸ್ಥಿತಿಯಲ್ಲಿ ಇದ್ದೇನೆ ನನ್ನ ಮಗ ಇಂಜಿನಿಯರಿಂಗ್ ಓದಿದ್ದಾನೆ ಅದೇ ರೀತಿ ನಾನು ಒಂದು ಮನೆಯನ್ನು ಕೂಡ ಕಟ್ಟಿಕೊಂಡಿದ್ದೇನೆ ಈ ಸಂಘ ಉತ್ತಮ ರೀತಿಯಲ್ಲಿ ಬೆಳೆಯಬೇಕು ಎಂದು ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಸಿಸ್ಟೆಂಟ್ ಮ್ಯಾನೇಜರ್ ಸಂಗೀತ ಕೃಷಿ ಮೇಲ್ವಿಚಾರಕ ಬೋರಯ್ಯ, ಸೇವಾ ಪ್ರತಿನಿಧಿಗಳಾದ ವಸಂತ,ಚಂದ್ರಕಲಾ ಮಮತಾ,ಸಂಘದ ಸದಸ್ಯರಾದ ಎಂ ಲೀಲಾ, ಜಯಪದ್ಮ, ಜಯಶ್ರೀ ಗೌರಮ್ಮ ವನಜ ಮಗ್ ಬುಲ್ ಸೆಮಿ ಮುನಿಸ, ಅಮೀನ, ಚಿನ್ನವಾಡು ವಿರೂಪಾಕ್ಷಪ್ಪ ಗೋಪಿ ಇನ್ನು ಹಲವರು ಉಪಸ್ಥಿತರಿದ್ದರು..
ವರದಿ : ಪಿಎಂ ಗಂಗಾಧರ




