ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿರುವ ಮರಾಠಾ ಕಲ್ಯಾಣ ಮಂಟಪದಲ್ಲಿ ತಾಲೂಕು ಮಟ್ಟದ ಯುವ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಸಸಿಗೆ ನೀರುಣಿಸುವ ಮೂಲಕ ಮುಖ್ಯ ಅತಿಥಿಗಳಾಗಿ ಶಾಸಕ ಹಾಗೂ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಸಭೆಯ ಉದ್ಘಾಟಕರಾದ ರಾಹುಲ್ ಜಾರಕಿಹೋಳಿ ಅವರು ಕೂಡಿ ಚಾಲನೆ ನೀಡಿದರು
ಈ ಒಂದು ಸಭೆಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಮದುರ್ಗ ತಾಲೂಕಿನ ಅಧ್ಯಕ್ಷರಾದ ಅನಿಕೇತ್ ಪ್ರದೀಪ್ ಪಟ್ಟಣವರು ಅವರ ಅಜ್ಜಾ ಅಜ್ಜಿ ಹಾಗೂ ಅವರ ದೊಡ್ಡಪ್ಪನ ಆಶೀರ್ವಾದ ಹಾಗೂ ಅವರ ಮಾರ್ಗದರ್ಶನದಲ್ಲಿ ಮತ್ತು ವೇದಿಕೆ ಮೇಲೆ ಕುಂತಂತ ಗುರುಹಿರಿಯರು ಹಾಗೂ ತಾಲೂಕಿನ ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರ ಆಶೀರ್ವಾದದಿಂದ ನಾನು ಇವತ್ತು ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ನಿಮ್ಮ ಮುಂದೆ ಇವತ್ತು ಈ ಒಂದು ವೇದಿಕೆ ಮೇಲೆ ಮಾತಾಡ್ತಾ ಇದೀನಿ ಅಂದರೆ ನಿಮ್ಮ ಆಶೀರ್ವಾದದಿಂದ ಎಂದರು. ಇವತ್ತಿನ ದಿನ ಸಾಕಷ್ಟು ಯುವಕರು ದುಷ್ಟ ಚಟಗಳಿಗೆ ಬಲಿಯಾಗ್ತಾ ಇದ್ದಾರೆ ದುಷ್ಟ ಚಟುಗಳನ್ನು ಮಾಡಬೇಡಿ ಇವತ್ತಿನ ದಿನ ನಮ್ಮ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರು ಯುವಕರಿಗೆ ಅಂತ ಯುವನಿಧಿ ಅಂತಾ ಯೋಜನೆ ಮಾಡಿದ್ದಾರೆ ಆ ದುಡ್ಡನ್ನು ಒಳ್ಳೆಯದಕ್ಕೆ ಉಪಯೋಗಿಸಿಕೊಳ್ಳಿ ಮತ್ತೆ ನಮ್ಮ ತಾಲೂಕಿನಲ್ಲಿ ಎಲ್ಲರೂ ಕೂಡಿ ಬಲಿಷ್ಠವಾದ ಯುವಶಕ್ತಿಯನ್ನಾಗಿ ಕಟ್ಟೋಣ ನಮ್ಮ ರಾಹುಲ್ ಅಣ್ಣ ಹಾಗೂ ಕಾರ್ತಿಕ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಎಲ್ಲ ಜನಗಳಿಗೆ ಒಳ್ಳೆ ಅಭಿವೃದ್ಧಿ ಕಾರ್ಯವನ್ನು ಮಾಡೋಣ ಎಂದು ಮಾತನಾಡಿದರು.
ಈ ಒಂದು ಸಭೆಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನಕಾರ್ಯದರ್ಶಿ ಆದ ರಾಹುಲ್ ಜಾರಕಿಹೋಳಿ ಮತ್ತು ಬೆಳಗಾವಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾರ್ತಿಕ್ ಪಾಟೀಲ್ ರಾಮದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು ಯುವಕರು ಭಾಗವಹಿಸಿ ಮಾತನಾಡಿ ಸಲೇಹ ಸೂಚನೆ ನೀಡಿದರು.
ಈ ಸಭೆಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ರಾಜ್ಯ ಪ್ರಧಾನಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಯುವ ಕಾಂಗ್ರೆಸ್ ಬಲವರ್ಧನೆ ಹಾಗೂ ಸಂಘಟನೆಯ ದೃಢೀಕರಣಕ್ಕಾಗಿ ಎಲ್ಲರು ಒಟ್ಟಾಗಿ ಶ್ರಮ ವಹಿಸಬೇಕು ಸಮಾಜದಲ್ಲಿ ಜನ ಸಾಮಾನ್ಯರಿಗೆ ತೊಂದರೆ ಆಗುವ ಸಂದರ್ಭಗಳಲ್ಲಿ, ಯುವ ಕಾಂಗ್ರೆಸ್ ಸದಾ ಜನರ ಜೊತೆಗೆ ನಿಂತು ಸಹಾಯ ಮಾಡಬೇಕು ಎಂಬುದು ನಮ್ಮೆಲ್ಲರ್ ಗುರಿಯಾಗಬೇಕೆಂದು ಎಂದರು.
ರಾಮದುರ್ಗ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿ ಮತ್ತು ಸದಸ್ಯರಿಗೆ ಶಾಸಕ ಅಶೋಕ್ ಪಟ್ಟಣ ಅವರ ಸಮುಖದಲ್ಲಿ ಆದೇಶ ಪತ್ರ ನೀಡಿದರು.
ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಯುವ ಸಮಿತಿಯ ಅಧ್ಯಕ್ಷರು ಮತ್ತು ರಾಮದುರ್ಗ ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷರು ಪದಾಧಿಕಾರಿಗಳು ಕಾಂಗ್ರೆಸ್ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ಕಲಾದಗಿ




