Ad imageAd image

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸ್ವೇಟರ್ ವಿತರಣೆ ಮಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್

Bharath Vaibhav
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸ್ವೇಟರ್ ವಿತರಣೆ ಮಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್
WhatsApp Group Join Now
Telegram Group Join Now

ಯಳಂದೂರು : ಹೊನ್ನೂರು ಗ್ರಾಮದಲ್ಲಿರುವ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಾಜಿ ಸಚಿವರು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಎನ್ ಮಹೇಶ್ ರವರು
ಹಾಗೂ ಮಾಜಿ ಶಾಸಕರಾದ ಎಸ್ ಬಾಲರಾಜು ಸ್ವೇಟರ್ ವಿತರಣೆ ಮಾಡಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಎನ್ ಮಹೇಶ್ ರವರು ಮಾತನಾಡಿ ಪಕ್ಷದ ವತಿಯಿಂದ ತಾಲ್ಲೋಕಿನ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸ್ವೇಟರ್ ವಿತರಣೆ ಮಾಡುತಿದ್ದೇವೆ ಈ ವಿತರಣೆ ಕಾರ್ಯಕ್ರಮವನ್ನು ಹೊನ್ನೂರು ಗ್ರಾಮದ ಶಾಲೆಯಿಂದ ಆರಂಭಿಸಿದ್ದೇವೆ ಚಳಿಗಾಲ,ಮಳೆಗಾಲದ ಸಮಯಕೆ ಮಕ್ಕಳಿಗೆ ಬೆಚ್ಚಗೆ ಇರಲು ಸ್ವೇಟರ್ ಅನುಕೂಲ ಆಗುತ್ತದೆ ಎಂದು ತಿಳಿಸಿದರು.

 

ಮಾಜಿ ಶಾಸಕರಾದ ಬಾಲರಾಜು ಮಾತನಾಡಿ ಚಳಿಗಾಲದಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂದು ನಮ್ಮ ಪಕ್ಷದ ವತಿಯಿಂದ ತಾಲೂಕಿನ ಮಕ್ಕಳಿಗೆ ವಿತರಣೆ ಮಾಡುತಿದ್ದೇವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ತಾಲೋಕು ಬಿಜೆಪಿ ಅಧ್ಯಕ್ಷರಾದ ಅನಿಲ್, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ರಾಮಣ್ಣ, ತಾಲೋಕು ಕಾರ್ಯದರ್ಶಿ ಕೆಂಪರಾಜು, ಹೊನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗುರುಪ್ರಸಾದ್, ಸದ್ಯಸರಾದ ಚಿನ್ನಸ್ವಾಮಿ, ಹಾಗೂ ಶಾಲೆಯ ಶಿಕ್ಷಕರು ಮಕ್ಕಳು, ಪಕ್ಷದ ಕಾರ್ಯಕರ್ತರು ಹಾಜರಿದ್ದರು

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!