Ad imageAd image

ರಾಜ್ಯೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Bharath Vaibhav
ರಾಜ್ಯೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ
WhatsApp Group Join Now
Telegram Group Join Now

————————————–ಹುಬ್ಬಳ್ಳಿಯ ಖ್ಯಾತ ಎಲಬು ಕೀಲು ತಜ್ಞರಾದಂತಹ ಡಾಕ್ಟರ್ ———————————————–ಮಹಾಂತೇಶ್ ಹಳೆಮಣಿ ಅವರಿಂದ 

ಹುಬ್ಬಳ್ಳಿ: ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹುಬ್ಬಳ್ಳಿಯ ಖ್ಯಾತ ಎಲಬು ಕೀಲು ತಜ್ಞರಾದಂತಹ ಡಾಕ್ಟರ್ ಮಹಾಂತೇಶ್ ಹಳೆಮಣಿ ಹಾಗೂ ಅವರ ಧರ್ಮಪತ್ನಿ ಸ್ತ್ರೀ ಪ್ರಸುತಿ ವೈದ್ಯರಾದಂತಹ ಡಾಕ್ಟರ್ ಸುಧಾ ಮಹಾಂತೇಶ್ ಹಳಮಣಿ ಇವರ ಸಯೋಗದಲ್ಲಿ ಹುಬ್ಬಳ್ಳಿಯ ಹಳೇ ಕೋರ್ಟ್ ಎದುರುಗಡೆ ಇರುವ ಕುಂದಗೋಳ ಕಾಂಪ್ಲೆಕ್ಸ್ ನಲ್ಲಿ ತಮ್ಮದೇ ಕ್ಲಿನಿಕ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದರು.

ತಪಾಸಣೆಯಲ್ಲಿ ಬಿ, ಎಂ, ಡಿ ನಿರೋಪತಿ. ಪೇನ್, ಮ್ಯಾನೇಜ್ಮೆಂಟ್ ಹಾಗೂ ಸ್ತ್ರೀಯರಿಗೆ ತಗಲುವಂತಹ ರೋಗಗಳ ಕುರಿತು ಉಚಿತ ತಪಾಸನೆ ನೆರವೇರಿಸಿದರು. ತಪಾಸನೆಗೆ ಬಂದಂತಹ ರೋಗಿಗಳಿಗೆ ಉಚಿತ ಫಲಹಾರ ವ್ಯವಸ್ಥೆಯನ್ನು ಕೂಡ ಮಾಡಲಾಗಿದ್ದು ಜನರ ಗಮನ ಸೆಳೆಯಿತು ಶಿಬಿರದಲ್ಲಿ ನೂರಾರು ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿದ್ದು ಇದರ ಉಪಯೋಗವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ  ದೇವರಾಜ್ ದಾಡಿಬಾಯ್ ನವಲಗುಂದ್ ಯುವ ಬಿಜೆಪಿ ಮುಖಂಡರು ಹಾಗೂ ಗಣ್ಯರು ಭಾಗವಹಿಸಿ ಶುಭ ಕೋರಿದರು.

ವರದಿ: ಗುರುರಾಜ ಹಂಚಾಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!