Ad imageAd image

ಸಚಿವ ಆರ್ ಬಿ ತಿಮ್ಮಾಪುರ ಕನ್ನಡ ರಾಜ್ಯೋತ್ಸವ ಪರೇಡ್ ವೇಳೆ ಕೆಟ್ಟು ನಿಂತ ವಾಹನ 

Bharath Vaibhav
ಸಚಿವ ಆರ್ ಬಿ ತಿಮ್ಮಾಪುರ ಕನ್ನಡ ರಾಜ್ಯೋತ್ಸವ ಪರೇಡ್ ವೇಳೆ ಕೆಟ್ಟು ನಿಂತ ವಾಹನ 
WhatsApp Group Join Now
Telegram Group Join Now

ಬಾಗಲಕೋಟೆ: ಇಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಅವರ ವಾಹನ ಕೆಟ್ಟುನಿಂತು ಭಾರೀ ಮುಖಭಂಗವಾಗಿದೆ.

ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗಿದೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಪರೇಡ್ ವೀಕ್ಷಣೆಗೆ ಆಗಮಿಸಿದ್ದು, ಆಗ ಅಡಚಣೆ ಉಂಟಾಗಿದೆ.

ಪರೆಡ್ ವೀಕ್ಷಣೆಗೆ ತೆರಳಬೇಕಿದ್ದ ತೆರೆದ ವಾಹನದಲ್ಲಿ ಕೆಲಕ್ಷಣ ತಾಂತ್ರಿಕ ದೋಷ ಉಂಟಾಗಿದೆ. ನಂತರ ಎರಡು ನಿಮಿಷಗಳ ಸತತ ಪ್ರಯತ್ನದ ಬಳಿಕ ವಾಹನ ಸ್ಟಾರ್ಟ್‌ ಆಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!