Ad imageAd image

ಬೇಡಿಕೆ ಬಂದರೆ APL ಪಡಿತರ ಚೀಟಿದಾರರಿಗೂ ಅಕ್ಕಿ‌ ಕೊಡುತ್ತೇವೆ : ಕೆ. ಎಚ್ ಮುನಿಯಪ್ಪ

Bharath Vaibhav
ಬೇಡಿಕೆ ಬಂದರೆ APL ಪಡಿತರ ಚೀಟಿದಾರರಿಗೂ ಅಕ್ಕಿ‌ ಕೊಡುತ್ತೇವೆ : ಕೆ. ಎಚ್ ಮುನಿಯಪ್ಪ
WhatsApp Group Join Now
Telegram Group Join Now

ಬೆಳಗಾವಿ : ಎಪಿಎಲ್ ಕಾರ್ಡ್‌ಗೆ ಮೊದಲು 15‌ ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಆದರೆ, ಅವರು ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಅದನ್ನು ನಿಲ್ಲಿಸಿದ್ದೆವು‌.

ಬೇಡಿಕೆ ಬಂದರೆ APL ಪಡಿತರ ಚೀಟಿದಾರರಿಗೂ ಅಕ್ಕಿ‌ ಕೊಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹೊಸ ಬಿಪಿಎಲ್ ಕಾರ್ಡ್ ಕಳೆದ ತಿಂಗಳು 30 ರಿಂದ ಅರ್ಜಿ ಹಾಕಲು ಅವಕಾಶ ಕೊಟ್ಟಿದ್ದೇವೆ.

ಸಂಬಂಧಿಸಿದ ತಹಶೀಲ್ದಾರ್ ಅವರಿಗೆ ಅರ್ಜಿ ಹಾಕಿದರೆ ಅರ್ಹರಿಗೆ ಹೊಸ ಕಾರ್ಡ್ ಕೊಡಲು ತೀರ್ಮಾನಿಸಿದ್ದೇವೆ. ಈಗಾಗಲೇ 10 ಲಕ್ಷ ಅನರ್ಹರನ್ನು ಎಪಿಎಲ್‌ಗೆ ಶಿಫ್ಟ್ ಮಾಡುತ್ತಿದ್ದೇವೆ ಎಂದರು.

ಗ್ಯಾರಂಟಿ ಯೋಜನೆಗಳು ಯಥಾವತ್ತಾಗಿ ಮುಂದುವರೆಯುತ್ತವೆ. ಅಭಿವೃದ್ಧಿ ಕಾರ್ಯಗಳಿಗೂ ಕೂಡ ಸರ್ಕಾರದ ಬಳಿ ಯಾವುದೇ ಹಣದ ಕೊರತೆ ಇಲ್ಲ ಅರ್ಹರಿಗೆ ಹೊಸ ಬಿಪಿಎಲ್ ಕಾರ್ಡ್ ಕೊಡುತ್ತಿದ್ದೇವೆ. 10 ಲಕ್ಷ ಅನರ್ಹರನ್ನು ಎಪಿಎಲ್ ಗೆ ಶಿಫ್ಟ್ ಮಾಡುತ್ತಿದ್ದೇವೆ ಎಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ಹೇಳಿಕೆ ನೀಡಿದರು.

ಎಪಿಎಲ್ ಕಾರ್ಡಿಗೆ ಮೊದಲು 15 ಕೆಜಿ ಅಕ್ಕಿ ಕೊಡುತ್ತಿದ್ದೆವು. ಅವರು ತೆಗೆದುಕೊಳ್ಳುತ್ತಾ ಇರಲಿಲ್ಲ ಹೀಗಾಗಿ ಅದನ್ನ ನಿಲ್ಲಿಸಿದೆವು ಡಿಮ್ಯಾಂಡ್ ಬಂದರೆ ಮತ್ತೆ ಅಕ್ಕಿ ಕೊಡುತ್ತೇವೆ ಒಂದು ವರ್ಷದಿಂದ ಅಕ್ಕಿ ತೆಗೆದುಕೊಳ್ಳುವವರನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿಕೆ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!