Ad imageAd image

ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಮೌಲ್ಯದ ಭೂಮಿ ಮಾರಾಟ : ಸಬ್ ರಜಿಸ್ಟರ್ ಸೇರಿ ಒಟ್ಟು 9 ಜನ ಅರೆಸ್ಟ್

Bharath Vaibhav
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಮೌಲ್ಯದ ಭೂಮಿ ಮಾರಾಟ : ಸಬ್ ರಜಿಸ್ಟರ್ ಸೇರಿ ಒಟ್ಟು 9 ಜನ ಅರೆಸ್ಟ್
WhatsApp Group Join Now
Telegram Group Join Now

ಬೆಳಗಾವಿ : ಬೆಳಗಾವಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ಮಾರಾಟ ಮಾಡಲಾಗಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಅಕ್ರಮವಾಗಿ ಭೂಮಿ ಮಾರಿ ವಂಚನೆ ಎಸಗಲಾಗಿತ್ತು. ಪ್ರಕರಣ ಭೇದಿಸಿದ ಪೊಲೀಸರು ಸಬ್ ರೆಜಿಸ್ಟರ್ ಸೇರಿದಂತೆ ಒಟ್ಟು ಒಂಬತ್ತು ಜನರನ್ನು ಅರೆಸ್ಟ್ ಮಾಡಿದ್ದಾರೆ.

ಭೂಗಳ್ಳರ ಜೊತೆಗೆ ಸಬ್ ರಿಜಿಸ್ಟರ್ ಅಧಿಕಾರಿ ಸೇರಿದಂತೆ ಹಲವರು ಶಾಮೀಲು ಆಗಿದ್ದರು. ಬೆಳಗಾವಿ ಜಿಲ್ಲಾ ಪೊಲೀಸರಿಂದ ಸಬ್ ರಿಜಿಸ್ಟರ್ ಸೇರಿದಂತೆ ಮೊದಲು 6 ಜನರನ್ನು ಅರೆಸ್ಟ್ ಮಾಡಲಾಗಿದೆ.

ಹುಕ್ಕೇರಿ ಪಟ್ಟಣದ ಸಭೆ ರಿಜಿಸ್ಟರ್ ಮಡಿವಾಳಯ್ಯ ಬಾನಿಮಠ, ದಾಖಲೆಗಳು ಫೋಟೋ ಎಡಿಟ್ ಮಾಡಿದ ಅಶೋಕ್ ಸೂರ್ಯವಂಶಿ, ಬಾಂಡ್ ರೈಟರ್ ಆನಂದ ದಡ್ಡಿಮನಿ, ಸೇರಿದಂತೆ ಆರು ಜನರ ಬಂಧನವಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಮಾರಾಟ ಮಾಡಿದ್ದಾರೆ.

ಜಮೀನು ಮಾಲೀಕರಿಗೆ ಗೊತ್ತಾಗದಂತೆ ಬೇರೆಯವರಿಗೆ ಜಮೀನು ಮಾರಾಟ ಮಾಡಿದ್ದಾರೆ. ಫೋಟೋಶಾಪ್ ಸಾಫ್ಟ್ವೇರ್ ನಲ್ಲಿ ಆಧಾರ್ ಕಾರ್ಡ್ ಎಡಿಟ್ ಮಾಡಿ ಈ ಒಂದು ಕೃತ್ಯ ಎಸಗಿದ್ದು, ಇದುವರೆಗೂ ಪೊಲೀಸರು ಆರು ಪ್ರಕರಣಗಳನ್ನ ಭೇದಿಸಿದ್ದಾರೆ.

ಹುಕ್ಕೇರಿ, ಮೂಡಲಗಿ ಹಾಗೂ ಸಂಕೇಶ್ವರದಲ್ಲಿ ಭೂಗಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಕುರಣಿ ಗ್ರಾಮದ 189/4 ಸರ್ವೇ ನಂಬರ್ 2.1 ಎಕರೆ ಜಮೀನು ಮಾರಾಟ ಮಾಡಲಾಗಿದೆ.

ಶಿವಾನಂದ ಮಾನಗಾವಿ ಎಂಬವರಿಗೆ ಸೇರಿದ ಜಮೀನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಕರಾರು ಪತ್ರ ಮಾಡಿ ಆಧಾರ್ ಕಾರ್ಡ್ ಎಡಿಟ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದರು.

ಆಧಾರ್ ಕಾರ್ಡ್ ಪರಿಕ್ಷಣೆ ಮಾಡಬೇಕಿದ್ದ ಅಧಿಕಾರಿಗಳು ವೈಫಲ್ಯ ಕಂಡು ಬಂದಿದೆ. ಈ ಒಂದು ಕೃತಕ್ಕೆ ಸಭೆಯ ರಿಜಿಸ್ಟರ್ ಕಚೇರಿಗೆ ಸಿಬ್ಬಂದಿ ಸಹಕಾರ ನೀಡಿದ ಆರೋಪ ಕೇಳಿ ಬಂದಿದ್ದು,ಆರು ಪ್ರಕರಣಗಳಲ್ಲಿ ಇದುವರೆಗೂ 9 ಜನರನ್ನು ಪೊಲೀಸರ ಅರೆಸ್ಟ್ ಮಾಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!