ಬಹ್ರೈನ್ : ಇರಾನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬೆನ್ನಲ್ಲೇ, ಇರಾನ್ ಸೇನೆಯು ಇಸ್ರೇಲ್ ಮತ್ತು ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿಯನ್ನು ಆರಂಭಿಸಿದೆ ಎಂದು ಇರಾನ್ನ ಸರ್ಕಾರಿ ದೂರದರ್ಶನ ವರದಿ ಮಾಡಿದೆ.
ಖಮೇನಿ ಅವರ ಸಾವಿನ ನಂತರ ಇಡೀ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದು, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ಮತ್ತು ಅಮೆರಿಕಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದೆ.
ಸರಣಿ ದಾಳಿ: ಖಮೇನಿ ಹತ್ಯೆಗೆ ಪ್ರತಿಕಾರವಾಗಿ ಇರಾನ್ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.
ಗುರಿಗಳು: ಇಸ್ರೇಲ್ನ ಪ್ರಮುಖ ನಗರಗಳು ಮತ್ತು ಈ ಭಾಗದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ.
IRGC ಎಚ್ಚರಿಕೆ: ಇತಿಹಾಸದಲ್ಲೇ ಅತ್ಯಂತ ಭಯಾನಕ ಮತ್ತು ಭೀಕರವಾದ ಆಕ್ರಮಣಕಾರಿ ಕಾರ್ಯಾಚರಣೆ” ನಡೆಸುವುದಾಗಿ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ಪ್ರತಿಜ್ಞೆ ಮಾಡಿದ್ದಾರೆ.




