Ad imageAd image

ಇಂದು -ವಿಶ್ವಪರಂಪರೆ ದಿನಾಚರಣೆ

Bharath Vaibhav
ಇಂದು -ವಿಶ್ವಪರಂಪರೆ ದಿನಾಚರಣೆ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು : ವಿಶ್ವಪರಂಪರೆ ದಿನಾಚರಣೆ ಪ್ರಯುಕ್ತ ಇದೇ ಶನಿವಾರ ದಿನಾಂಕ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಚನ್ನಮ್ಮನ ಕಿತ್ತೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚುನಾವಣಾ ಕಿತ್ತೂರು ಹಾಗೂ ಕಿ ನಾ ವಿ ವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಚನ್ನಮನ ಕಿತ್ತೂರು ಇವರ ಸಹಯೋಗದಲ್ಲಿ ಕಿತ್ತೂರು ಅರಸರ ಸಮಾಧಿಗಳ ಸ್ವಚ್ಛತಾ ಕಾರ್ಯಕ್ರಮ ಹಾಗೂ “ವಿಪತ್ತುಗಳು ಮತ್ತು ಸಂಘರ್ಷಗಳಲ್ಲಿ ಜೀವಂತ ಪರಂಪರಿಗಾಗಿ ತುರ್ತು ಪ್ರತಿಕ್ರಿಯೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾನವ ನಾಗರಿಕತೆಯ ಐತಿಹಾಸಿಕ ಸ್ಮಾರಕಗಳು ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ತಾಣಗಳ ರಕ್ಷಣೆ ಸಂರಕ್ಷಣೆ ಹಾಗೂ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ಕಿತ್ತೂರಿನ ಶಾಸಕರಾದ ಬಾಬಾ ಸಾಹೇಬ್ ಪಾಟೀಲ ಇವರು ಚಾಲನೆ ನೀಡುವರು. ಈ ಕಾರ್ಯಕ್ರಮದಲ್ಲಿ ಎರಡೂ ಕಾಲೇಜುಗಳ ಎನ್ಎಸ್ಎಸ್ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸು ವರು. ಎಂದು ಪ್ರಾಚ್ಯವಸ್ತು ಸಂಗ್ರಹಾಲಯದ ಕ್ಯುರೆಟರ್ ರಾಘವೇಂದ್ರ ಅವರು ಹೇಳಿದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!