Ad imageAd image

ಸರಳ ರೀತಿಯಲ್ಲಿ ಭಕ್ತಿಭಾವದೊಂದಿಗೆ ಬಸವೇಶ್ವರ ಜಯಂತಿ ಆಚರಣೆ

Bharath Vaibhav
ಸರಳ ರೀತಿಯಲ್ಲಿ ಭಕ್ತಿಭಾವದೊಂದಿಗೆ ಬಸವೇಶ್ವರ ಜಯಂತಿ ಆಚರಣೆ
WhatsApp Group Join Now
Telegram Group Join Now

ಗೋಕಾಕ : ನಗರದ ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿಯನ್ನು ಶಾಸಕ ರಮೇಶ ಜಾರಕಿಹೋಳಿಯವರು ಸ್ಥಳಿಯ ಬಿಜೆಪಿ ಕಾರ್ಯಕರ್ತರೊಂದಿಗೆ ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪಾರ್ಷಣೆ ಮಾಡಿ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಅದ್ಯಕ್ಷ ಮಡ್ಡೆಪ್ಪ ತೊಳಿನವರ, ನಗರ ಘಟಕ ಅದ್ಯಕ್ಷ ಭೀಮಶಿ ಭರಮನ್ನವರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.

ಇನ್ನು ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ವಿಶ್ವಗುರು ,ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಭಕ್ತಿ ಭಾವದಿಂದ ಸರಳ ರೀತಿಯಿಂದ ಆಚರಿಸಿದರು.

ಮುಂಜಾನೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ.ಎತ್ತಿನ ಬಂಡಿಯಲ್ಲಿ ಬಸವೇಶ್ವರ ಭಾವ ಚಿತ್ರನಿಟ್ಟು ಸಮುಂಗಲಿಯರ ಕುಂಬ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಬ್ಯಾಂಡ ವಾದ್ಯದೊಂದಿಗೆ ಮೆರವಣಿಗೆ ನಡೆಸಿದರು.

ನಂತರ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಮರಡಿಮಠದ ಶ್ರೀ ಪವಾಡೇಶ್ವರ ಸ್ವಾಮಿಜಿಗಳು ಪೂಜೆ ಸಲ್ಲಿಸಿ ಅಕ್ಷತೆ ಹಾಕಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸ್ಥಳಿಯರಾದ ಶಿವಾನಂದ ಗಣಾಚಾರಿ. ರಾಜು ತೇಲಿ, ಕಾಡಣ್ಣಾ ಮಲ್ಲನ್ನವರ, ಮಂಜುನಾಥ ಹುಕ್ಕೇರಿ, ಬಸವರಾಜ ಕುಂಬಾರ ,ನಾಗರಾಜ ಸಂಗೋಳ್ಳಿ ಸೇರಿದಂತೆ ಇನ್ನುಳಿದವರು ಇವತ್ತಿನ ಜಯಂತಿಯಲ್ಲಿ ಬಾಗಿಯಾಗಿದ್ದರು.

 ವರದಿ  : ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!