Ad imageAd image

ಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ

Bharath Vaibhav
ಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ
WhatsApp Group Join Now
Telegram Group Join Now

ಬಾಗಲಕೋಟೆ: ಸುಳ್ಳು ಕೇಸ್ ದಾಖಲಿಸುತ್ತೇನೆಂದು ವ್ಯಕ್ತಿಯೊಬ್ಬನಿಂದ ಲಂಚ ಪಡೆಯುವಾಗ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ಪಿ.ಎಸ್.ಐ.ಭೀಮಪ್ಪ ರಬಕವಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಗಳವಾರ ಫಿರ್ಯಾದಿದಾರ ಬೆಳಗಂಟಿ ಕೆರೂರ ನಿವಾಸಿ ಮುತ್ತಪ್ಪ ಹುಲ್ಲಪ್ಪ ನಾಯ್ಕರ ಇವರು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾದಿ ನೀಡಿದ್ದರಲ್ಲಿ, ಎ.17 ರಂದು ಫಿರ್ಯಾದಿಯ ಸ್ನೇಹಿತ ಶಂಕ್ರಪ್ಪ ನೀಲಪ್ಪ ಬೂದಿಹಾಳ ಸಾ:ಕೆರೂರ ಇವನಿಗೆ ಅವನ ಮೋಟರ ಸೈಕಲ್ ನಂ:ಕೆಎ-29 ಇಸಿ-0914 ಸಮೇತ ಕೆರೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂಡಿಸಿ ಅವನಿಗೆ ಇಸ್ಪೀಟ್ ಆಡಿಸಿದ್ದಿಯಾ. ಬಡ್ಡಿ ಆಡಿದ್ದೀಯಾ ಅಂತಾ ಸುಳ್ಳು ಆಪಾದನೆ ಮಾಡಿ ನಿನ್ನ ಮೇಲೆ ಕೇಸ್ ಮಾಡುತ್ತೇವೆ ಅಂತಾ ಹೆದರಿಸಿ ರೂ.1.70,000=00 ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಎ.18 ರಂದು ರಾತ್ರಿ ಶಂಕ್ರಪ್ಪ ಬೂದಿಹಾಳ ಇವನಿಗೆ ಕೆರೂರ ಪೊಲೀಸ್ ಠಾಣೆಯಿಂದ ಬಿಟ್ಟು ಕಳುಹಿಸಿ ಲಂಚದ ಹಣ ಕೊಟ್ಟು, ಅವನ ಮೋಟರ ಸೈಕಲ್ ನಂ:ಕೆಎ-29 ಇಸಿ-0914 ನೇದ್ದನ್ನು ಬಿಡಿಸಿಕೊಂಡು ಹೋಗಲು ತಿಳಿಸಿ ಲಂಚಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಫಿರ್ಯಾದಿದಾರರು ದೂರು ನೀಡಿದ್ದರಿಂದ ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇಂದು ಬುಧವಾರ ಸದರ ಪ್ರಕರಣದಲ್ಲಿಯ ಆಪಾದಿತರಾದ ಪಿ.ಎಸ್.ಐ. ಭೀಮಪ್ಪ ರಬಕವಿ, ಪೊಲೀಸ್ ಪೇದೆ ಸಂತೋಷ ಬಿರಾದಾರ ಇಬ್ಬರೂ ಕೆರೂರ ಪೊಲೀಸ್ ಠಾಣೆ, ಇವರುಗಳು ಫಿರ್ಯಾದಿಯಿಂದ ಲಂಚದ ಹಣ ರೂ.1,70,000=00 ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುತ್ತಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾಂವಿ, ಇವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ. ಸುರೇಶರೆಡ್ಡಿ, ಬಿ.ಎ. ಬಿರಾದಾರ, ಎಂ.ಬಿ. ಬಿರಾದಾರ, ಮತ್ತು ಎನ್. ಆರ್. ಖಿಲಾರೆ, ಪಿಐ-3 ಕರ್ನಾಟಕ ಲೋಕಾಯುಕ್ತ ಬಾಗಲಕೋಟೆ ಹಾಗೂ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.
ವರದಿ : ಬಸವರಾಜ ಪೂಜಾರಿ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!