Ad imageAd image

ರಾಜ್ಯದಲ್ಲಿ ಮತ್ತೆ `ಡೆಂಗ್ಯೂ’ ಅಬ್ಬರ : ತುಮಕೂರಿನಲ್ಲಿ 7 ವರ್ಷದ ಬಾಲಕ ಸಾವು.!

Bharath Vaibhav
ರಾಜ್ಯದಲ್ಲಿ ಮತ್ತೆ `ಡೆಂಗ್ಯೂ’ ಅಬ್ಬರ : ತುಮಕೂರಿನಲ್ಲಿ 7 ವರ್ಷದ ಬಾಲಕ ಸಾವು.!
WhatsApp Group Join Now
Telegram Group Join Now

ತುಮಕೂರು : ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಜ್ವರದ ಅಬ್ಬರ ಶುರುವಾಗಿದ್ದು, ತುಮಕೂರು ಜಿಲ್ಲೆಯಲ್ಲಿ 7 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಬಾಳ್ಮೆಯನ ಗುಡಿಬೀದಿಯಲ್ಲಿ 7 ವರ್ಷದ ಬಾಲಕನೊಬ್ಬ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕರುಣಾಕರ (7) ಮೃತ ಬಾಲಕ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲಕ ಕಳೆದ 8 ದಿನಗಳಿಂದ ಪಾವಗಡದ ಸುಧಾ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೇ ಇಂದು ಬಾಲಕ ಮೃತಪಟ್ಟಿದ್ದಾನೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article
error: Content is protected !!