ಬಿಹಾರ:ಬ್ಯಾಂಕ್‌ನಲ್ಲಿ ಪಡೆದ ಸಾಲವನ್ನು ವಸೂಲಿ ಮಾಡಲು ಬಂದ ಬ್ಯಾಂಕ್ ಉದ್ಯೋಗಿ ಜತೆ ವಿವಾಹಿತೆಯೊಬ್ಬಳು ಓಡಿಹೋಗಿ ಮದುವೆಯಾಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಸಾಲದ ಹಣ ಪಡೆಯಲು ಬ್ಯಾಂಕ್ ಉದ್ಯೋಗಿ ಆಕೆಯ ಮನೆಗೆ ಹೋಗುತ್ತಿದ್ದನು. ಈ ಸಮಯದಲ್ಲಿ ಇಬ್ಬರು ಪ್ರೀತಿಗೆ ಸಿಲುಕಿದ್ದು, ಕಳೆದ 5 ತಿಂಗಳಿಂದ ರಹಸ್ಯವಾಗಿ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಇವರ ವಿವಾಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಇಡೀ ಘಟನೆ ಮಂಗಳವಾರ(ಫೆ.11) ರಂದು ನಡೆದಿದೆ. ವಿವಾಹಿತ ಮಹಿಳ ಜುನಾಯಿ ಮುನ್ಸಿಪಾಲ್ ಕೌನ್ಸಿಲ್‌ನ ಶ್ರೀಪುರಾ ಸಿಂಗ್ ಘಾಟ್‌ನ ಇಂದ್ರ ಕುಮಾರಿ. ಇಲ್ಲಿನ ಲಚುವಾಲ್ ಪೊಲೀಸ್‌ಠಾಣೆ ವ್ಯಾಪ್ತಿಯ
ಜತ್ಕಾಲ್ ಗ್ರಾಮ ನಿವಾಸಿಯಾದ ಬ್ಯಾಂಕ್ ಉದ್ಯೋಗಿ ಪವನ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಇಬ್ಬರು
ವುರಾ ಸಿಂಗ್ ಘಾಟ್‌ನ ಬಾಬಾ ಭೂಥೇಶ್ವರ್‌ನಾಥ್ ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದಾರೆ.
ಬ್ಯಾಂಕ್‌ನಿಂದ ಸಾಲ ಪಡೆದಿದ್ದ ಮಹಿಳೆ, ಪವನ್ ಕುಮಾರ್ ಬ್ಯಾಂಕಿನ ಆಕೌಂಟ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಾನೆ.
ವಿವಾಹಿತ ಮಹಿಳೆ ಇಂದ್ರ ಕುಮಾರಿ ಸಾಲ ಪಡೆದಿದ್ದರು. ಸಾಲ ವಸೂಲಾತಿಗಾಗಿ ಪವನ್ ಆಗಾಗ ಇಂದ್ರಕುಮಾರಿ ಅವರ ಮನೆಗೆ ಭೇಟಿ ನೀಡುತ್ತಿದ್ದರು.
ಈ ಸಮಯದಲ್ಲಿ ಇಂದ್ರ ಕುಮಾರಿ ಪವನ್‌ನನ್ನು ಪ್ರೀತಿಸುತ್ತಿದ್ದಳು ಮತ್ತು ಇಬ್ಬರೂ ಮೊಬೈಲ್ ಕರೆಗಳಲ್ಲಿ ಗಂಟೆಗಟ್ಟಲೆ ಮಾತನಾಡಲು ಪ್ರಾರಂಭಿಸಿದರು. ಅವರಿಬ್ಬರೂ ಸುಮಾರು ಐದು ತಿಂಗಳುಗಳ ಕಾಲ ರಹಸ್ಯವಾಗಿ ಭೇಟಿಯಾಗುತ್ತಲೇ ಇದ್ದರು. ಫೆಬ್ರವರಿ 4 ರಂದು ಇಂದ್ರ ಕುಮಾರಿ ತನ್ನ ಗಂಡನನ್ನು ಬಿಟ್ಟು ಪವನ್ ಕುಮಾರ್ ಜೊತೆ ಓಡಿಹೋಗಿದ್ದಳು ಎಂದು ವರದಿಯಾಗಿದೆ.