Ad imageAd image

ಕಂದಗಲ್ಲ ಗ್ರಾಮಕ್ಕೆ ನೂತನ ಬಸ್ ಪ್ರಾರಂಭ

Bharath Vaibhav
ಕಂದಗಲ್ಲ ಗ್ರಾಮಕ್ಕೆ ನೂತನ ಬಸ್ ಪ್ರಾರಂಭ
WhatsApp Group Join Now
Telegram Group Join Now

 ——————-ಕಂದಗಲ್ಲ ಗ್ರಾಮಕ್ಕೆ ಪ್ರಾರಂಭವಾದ ನೂತನ ಮುದಗಲ್ಲ ಕಂದಗಲ್ಲ ಇಲಕಲ್ಲ ಮಿರಜ ಬಸ್ಸು.

ಕಂದಗಲ್ಲ : ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮಕ್ಕೆ ಮುದುಗಲ್ಲ ಕಂದಗಲ್ಲ ಇಳಕಲ್, ಮಾರ್ಗವಾಗಿ ಮಿರಜ್ ಗೆ ತಲುಪುವ ನೂತನ ಬಸ್ ಪ್ರಾರಂಭಗೊಂಡಿತು.

ಈ ಬಸ್ಸನ್ನು ಕಂದಗಲ್ಲ ಮಾರ್ಗವಾಗಿ ಓಡಿಸಲು ಶ್ರಮಿಸಿದ ತಾಲೂಕ ಜನಪ್ರಿಯ ಶಾಸಕರು ಹಾಗೂ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ವಿಜಯಾನಂದ ಕಾಶಪ್ಪನವರ್ ಅವರಿಗೆ ಮತ್ತು ಇಳಕಲ್ ಬಸ್ ಘಟಕದ ಮ್ಯಾನೇಜರ್ ಆದ ಜಿ ಎನ್ ಬಿರಾದರ್ ಇವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.


ನೂತನ ಅಂತರ ರಾಜ್ಯ ಮಾರ್ಗದ ಬಸ್ಸಿನ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿ,ಬಸ್ಸನ್ನು ತಳಿರು ತೋರಣಗಳಿಂದ ಶೃಂಗರಿಸಿ ಪೂಜೆ ನೆರವೇರಿಸಿ ಅತ್ಯಂತ ವಿಜೃಂಭಣೆಯಿಂದ ಪ್ರಾರಂಭ ಮಾಡಲಾಯಿತು.

ನೂತನ ಬಸ್ ಹಾಗೂ ಮಾರ್ಗದ ಕುರಿತು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಮಹಮ್ಮದ್ ಸಾಬ್ ಬಾವಿಕಟ್ಟಿ ಹಾಗೂ ಮಹಾಂತೇಶ ಕಡಿವಾಲ್ ಮತ್ತು ಪತ್ರಕರ್ತ ವೀರೇಶ್ ಶಿಂಪಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಬಸವರಾಜ ಅಳ್ಳೊಳ್ಳಿ, ಹಿರಿಯರಾದ ಈರಪ್ಪ ಅಳ್ಳೊಳ್ಳಿ ಅಬ್ದುಲ್ ಸಾಬ ಎಲಿಗಾರ, ಕನಕಪ್ಪ ಕನಕೇರಿ, ಸಂಗಣ್ಣ ಹವಲ್ದಾರ, ಹುಸೇನ್ ಸಾಬ್ ಬಾಗವಾನ್,ಗುರುಪಾದಪ್ಪ ಪುರಾದನ್ನವರ,ರಮೇಶ್ ದಾಸರ, ಶರಣಪ್ಪ ಬಳಿಗಾರ, ಅಮರೇಶ್ ರುಮ್ಮಿ, ಗುರು ಗಾಣಿಗೇರ, ಮಲ್ಲಪ್ಪ ಪೋತನಾಳ, ಮಹಾಂತೇಶ್ ಗೋದಿ,ಸುಭಾಷ್ ಕುಸುಬಿ, ಪ್ರಭು ಲಿಂಗಯ್ಯ ಹಿರೇಮಠ, ಮಲ್ಲು ಚಿತ್ರಗಾರ ಹಾಗೂ ಕಂದಗಲ್ಲ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!