ಬೆಂಗಳೂರು : ಕಳ್ಳರು ಎಲ್ಲೇ ಇದ್ರೂ ಕಳ್ಳರೆ .. ಒಮ್ಮೆ ಕಳ್ಳತನ ಕಲಿತರೆ ಚಟ ಬಿಡೋದು ಕಷ್ಟ. ಇಲ್ಲೊಬ್ಬ ಖತರ್ನಾಕ್ ಕಳ್ಳ ಪೊಲೀಸ್ ಸ್ಟೇಶನ್ ನಲ್ಲೇ ಮೊಬೈಲ್ ಕದ್ದು ಶಾಕ್ ಮೂಡಿಸಿದ್ದಾನೆ.
ಖದೀಮ ಪೊಲೀಸರ ಎದುರೇ ಅವರದ್ದೇ ಮೊಬೈಲ್ ಕದ್ದಿದ್ದಾನೆ. ಚೋರನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಮುಲ್ಲಾ ಅನ್ನೋ ವ್ಯಕ್ತಿಯೇ ಈ ಕಳ್ಳತನ ಮಾಡಿದ್ದಾನೆ.
ಹೋಟೆಲ್ ಒಂದರಲ್ಲಿ ನಡೆದಿದ್ದ ಗಲಾಟೆ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಈ ಮುಲ್ಲಾ ಪೊಲೀಸ್ ಸ್ಟೇಷನ್ ಗೆ ಬಂದಿದ್ದನು.
ಬಿಲ್ ಕೊಡದ ಗಲಾಟೆ ಮಾಡಿದ್ದ ವ್ಯಕ್ತಿಯ ಪರವಾಗಿ ಸ್ಟೇಷನ್ ಗೆ ಬಂದಿದ್ದ ಎಂದು ಹೇಳಲಾಗಿದೆ. ಒಳಗೆ ವಿಚಾರಣೆ ನಡೆಯುತ್ತಿದ್ದಾಗ ಆಚೆ ನಿಂತು ಮೊಬೈಲ್ ಕದ್ದಿದ್ದಾನೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಮಹಿಳಾ ಸಿಬ್ಬಂದಿಯೊಬ್ಬರ ಜೊತೆ ಮಾತನಾಡುತ್ತಿದ್ದ ವೇಳೆ ಅವರ ಮೊಬೈಲ್ ಕದ್ದಿದ್ದಾನೆ ಎನ್ನಲಾಗಿದೆ.