ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಸಮೀಪವಿರುವ ಗುರುಗುಂಟಾ ಗ್ರಾಮದಲ್ಲಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡ ವಿರೂಪಾಕ್ಷಪ್ಪ ಸರ್ಜನ್ ಇವರ ಮನೆಯಲ್ಲಿ ಯಾರು ಇಲ್ಲದಿದ್ದಾಗ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಹಾಡು ಹಗಲೇ 2. 43.000 ಮೌಲ್ಯದ ನಗದು ನಾಣ್ಯ ದೋಚಿ ಪರಾರಿಯಾಗಿದ್ದರು.
ಮನೆ ಮಾಲೀಕ ಹಟ್ಟಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ, ಅದರ ಅನ್ವಯ ರಾಯಚೂರು ಜಿಲ್ಲಾ ಎಸ್ ಪಿ ಪುಟ್ಟ ಮಾದಯ್ಯ, ಹೆಚ್ಚುವರಿ ಎಸ್ ಪಿ ಹರೀಶ್,ಲಿಂಗಸ್ಗೂರು ಡಿ ಎಸ್ ಪಿ ದತ್ತಾತ್ರೇಯ ಕಾರ್ನಾಡ್ ಮಾರ್ಗದರ್ಶನದಲ್ಲಿ ಹಟ್ಟಿ ಚಿನ್ನದ ಗಣಿಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ನೇತೃತ್ವದಲ್ಲಿ ತಂಡ ರಚಿಸಿ ಕಳ್ಳನ ಪತ್ತೆಗೆ ತನಿಖೆ ಆರಂಭಿಸಿದಾಗ ಮನೆಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ
ಒಟ್ಟು ಆರೋಪಿಯಿಂದ 8 ಲಕ್ಷ ಬೆಲೆಬಾಳುವ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ
ಆರೋಪಿಯನ್ನು ಬಂಧಿಸಲು ಯಶಸ್ವಿಯಾದ ಪೊಲೀಸ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ, ಪಿ ಎಸ ಐ ಧರ್ಮಣ್ಣ, ಎಸ್ ಐ ಶೇಕ್ ರೆಹಮಾನ್ , ಪೊಲೀಸ್ ಸಿಬ್ಬಂದಿಯಾದ ನಾರಾಯಣ್, ಬಸವರಾಜ್, ವಿಶ್ವನಾಥ್, ಬಸವರಾಜ , ವಿಜಯ್, ಬಸವರಾಜ್,ಅಮರೇಶ್, ಶರಣಬಸವ,ನಾಗಾರ್ಜುನ್, ಹಾಗೂ ಅಜೀಮ್ ಪಾಷಾ ಜಿಲ್ಲಾ ಪೊಲೀಸ್ ಕಚೇರಿ ರಾಯಚೂರ
ಈ ಪತ್ಯ ಕಾರ್ಯಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು ಪಿ ಐ ಹಾಗೂ ಸಿಬ್ಬಂದಿಯವರಿಗೆ ಪ್ರಶಂಸೆ ಯನ್ನು ವ್ಯಕ್ತಪಡಿಸಿದ್ದಾರೆ.
ವರದಿ : ಶ್ರೀನಿವಾಸ ಮಧುಶ್ರೀ