ಅಸ್ಸಾಂ: ಧುಬ್ರಿಯಲ್ಲಿ ಬಕ್ರೀದ್ ಹಬ್ಬದಂದು ಹನುಮಂತನ ದೇವಸ್ಥಾನದ ಬಳಿ ಹಸುವಿನ ರುಂಡ ಮತ್ತು ದನದ ಮಾಂಸ ಬಿಸಾಡಿ ವಿಕೃತಿ ಮೆರೆದಿದ್ದ ದುಷ್ಕರ್ಮಿಗಳ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಅಸ್ಸಾಂ ಸಿಎಂ ಹಿಮಂತ ಶರ್ಮಾ ಆದೇಶ ಹೊರಡಿಸಿದ್ದಾರೆ.
ಮೊನ್ನೆಯ ಬಕ್ರೀದ್ ದಿನದಂದು ಕೆಲವು ದುಷ್ಕರ್ಮಿಗಳು ಹನುಮಾನ್ ದೇವಸ್ಥಾನದ ಮುಂಭಾಗದಲ್ಲಿ ಉದ್ದೇಶಪೂರ್ವಕವಾಗಿ ಹಸುವಿನ ತಲೆ..ಗೋಮಾಂಸವನ್ನು ಎಸೆದು, ದೇವಾಲಯದ ಆವರಣವನ್ನು ಅಪವಿತ್ರಗೊಳಿಸಿ ವಿಕೃತಿ ಮೆರೆದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಮಂತ ಶರ್ಮಾ ಕೋಮುವಾದಿ ಗುಂಪು ಹಿಂದೂ ದೇವಾಲಯಗಳಿಗೆ ಹಾನಿ ಮಾಡುವ ಅಗೌರವ ತೋರುವ ದುರುದ್ದೇಶದಿಂದ ಈ ಕೃತ್ಯವೆಸಗಿದೆ ಎಂದು ಗುಡುಗಿದ್ದಾರೆ.
ಈ ರೀತಿ ಹಿಂದೂ ದೇವಾಲಯಗಳು ಅಥವಾ ನಾಮಘರ್‌ಗಳನ್ನು ದುಷ್ಟತನದಿಂದ ಅಪವಿತ್ರಗೊಳಿಸಿದ ಶಕ್ತಿಗಳ ವಿರುದ್ಧ ನಮ್ಮ ಬಿಜೆಪಿ ಸರ್ಕಾರ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದು ಹೇಳಿರುವ ಅವರು, ಕಂಡಲ್ಲಿ ಗುಂಡಿಕ್ಕಲು ಆದೇಶಿಸಿದ್ದಾರೆ.