ಸೇಡಂ:- ಪಟ್ಟಣದ ಆಶ್ರಯ ಕಾಲೊನಿ ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ.

ಈ ಹಿಂದೆ ಭಾರತ ವೈಭವ ವರದಿಗೆ ಸ್ಪಂದಿಸಿದ ಅಧಿಕಾರಿ ಒಂದು ಬೋರ್ ವೆಲ್ ಮೋಟಾರ್ ಹಾಕಿಸಿದಂತೆ ಮಾಡಿ ಪುನಃ ಅದೇ ಸಮಸ್ಯೆಗೆ ಜನರು ಒಳಗಾಗುವಂತೆ ಮಾಡಿದ್ದಾರೆ.

ಕಾಲೋನಿಯ ಜನರು ಪಂಪ್ ಆಪರೇಟರ್ ರಾಜು ಟಿ,ಎಂ,ಸಿ ಅವರಿಗೆ ಕರೆ ಮಾಡಿ ಕೇಳಿದರೆ ನಿಮ್ಮ ಇಷ್ಟ ಬಂದವರ ಹತ್ತಿರ ದೂರು ನೀಡಿ ನಮಗೇನು ಸಮಸ್ಯೆ ಇಲ್ಲ ಅಂತ ಜನರಿಗೆ ಹೇಳಿಕೆ ನೀಡಿದ್ದಾರೆ ಎಂದು ಕಾಲೊನಿ ನಿವಾಸಿ ಅಶೋಕ್ ತಿಳಿಸಿದ್ದಾರೆ.

ಈ ಸಮಸ್ಯೆಯನ್ನು ಅನೇಕ ವರ್ಷಗಳಿಂದ ಅನುಭವಿಸುತ್ತಿದ್ದು ದಯವಿಟ್ಟು ಸ್ಥಳೀಯ ಶಾಸಕರು ಹಾಗೂ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲರಿಗೆ ಸಮಸ್ಯೆಯನ್ನು ಪರಿಹರಿಸಿ ತಮಗೆ ನೀರಿನ ಅನುಕೂಲ ಮಾಡುವಂತೆ ಕಾಲೊನಿ ನಿವಾಸಿಗರು ಮನವಿ ಮಾಡಿಕೊಂಡಿದ್ದಾರೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.




