ಭಾಲ್ಕಿ: ನಾವು ಭರವಸೆಯ ಯಾತ್ರಿಕರು: ಸಂಭ್ರಮಿಸೋಣ, ಸೇವೆಗೈಯೋಣ ಎಂದು ದೇವಿಡ ಅಂತೋನಿ ಧರ್ಮ ಕೇಂದ್ರದ ಗುರುಗಳು ಸಕಲ ಭಕ್ತಾದಿಯನ್ನು ಉದ್ದೇಶಿಸಿ ಮಾಹಿತಿ ನೀಡಿದರು.
ಮುಂದುವರೆಸಿ ಮಾತನಾಡಿ ಉತ್ತರ ಕರ್ನಾಟಕ ಭಾಗದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕು ಕೇಂದ್ರ ಸ್ಥಾನದ ಹೊರವಲಯದಲ್ಲಿ ಇರುವ ಬಾಲಯೇಸುವಿನ ಪುಣ್ಯ ಕ್ಷೇತ್ರವು ವಿಶೇಷವಾದದ್ದು. ಕ್ರೈಸ್ತ ಜನರಿಗೆ ಮಾತ್ರ ಸೀಮಿತವಾಗಿರದೆ, ಇಲ್ಲಿ ಬರುವ ಸರ್ವಜನರಿಗೂ ಇದು ಪವಿತ್ರ ಪುಣ್ಯಕ್ಷೇತ್ರವಾಗಿದೆ. ತನ್ನ ಬಳಿ ಬಂದ ಎಲ್ಲಾ ಸಮುದಾಯದ ಭಕ್ತಜನರನ್ನು ಹರಸಿ, ಆಶೀರ್ವಾದ ಮಾಡುವ ಬಾಲಯೇಸು ಪ್ರತಿಯೊಬ್ಬರ ಜೀವನದಲ್ಲೂ ಅದ್ಭುತವನ್ನು ಮಾಡಿದ್ದಾರೆ.
ಇಲ್ಲಿಯ ತನಕ ಬಾಲಯೇಸು ಮಾಡಿದ ಎಲ್ಲಾ ಮಹತ್ಕಾರ್ಯ ವಂದನೆಯನ್ನು ಸಲ್ಲಿಸಿ ಮತ್ತೊಮ್ಮೆ ದೇವರ ಕೃಪೆಗೆ ಪಾತ್ರರಾಗಲು ನಮಗೆ ಸದಾವಕಾಶವನ್ನು ನೀಡಿದ್ದಾರೆ. ಆದ್ದರಿಂದ ಈ ವರ್ಷವು ನವೆಂಬ 7 ರಿಂದ 9 ರ ತನಕ ನಡೆಯಲಿರುವ ಬಾಲಯೇಸುವಿನ ಪುಣ್ಯ ಜಾತ್ರೋತ್ಸವಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸುತ್ತೇವೆ. ಬನ್ನಿ ತಾವು ಬನ್ನಿ ತಮ್ಮೆಲ್ಲರನ್ನು ಕರೆತನ್ನಿ ನಾವೆಲ್ಲರೂ ಸೇರಿ ಈ ಜಾತ್ರಾ ಸಂಭ್ರಮವ ಭಾಗವಹಿಸೋಣ, ಇಲ್ಲಿ ನಡೆಯುವ ಭಕ್ತಿಯುತ ದೈವ ಕಾರ್ಯಗಳಲ್ಲಿ ಪಾಲ್ಗೊಂಡು ದೇವರ ಆಶೀರ್ವಾದಗಳನ್ನು ಹೇರಳವಾಗಿ ಪಡೆಯೋಣ ಎಂದು ಹೇಳಿದರು.ಶ್ರೀನಿವಾಸ ಬೇಂದ್ರೆ ಅವರು ಮಾತನಾಡಿ ಕಾರ್ಯಕ್ರಮದ ಮಾಹಿತಿ ನೀಡಿದರು.
ವರದಿ: ಸಂತೋಷ ಬಿಜಿ ಪಾಟೀಲ




