ಬೆಳಗಾವಿ : ಸುಮುದಾಯ ಭವನ ನಿರ್ಮಾಣದ ವಿಚಾರವಾಗಿ ಎರಡು ಸಮುದಾಯಗಳ ಜನರ ನಡುವೆ ಮಾರಾ-ಮಾರಿ, ಪರಸ್ಪರ ಕಲ್ಲು ತೂರಾಟವಾಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಂಭೀರಗಾಯವಾದ ಘಟನೆ ಗಣಾಚಾರಿ ಗಲ್ಲಿಯಲ್ಲಿ ನಡೆದಿದೆ.
ಸಮುದಾಯದ ಭವನ ನಿರ್ಮಾಣದ ಮಹಾನಗರ ಪಾಲಿಕೆಯ ಜಾಗಕ್ಕಾಗಿ ಎರಡು ಸಮುದಾಯದ ನಡುವೆ ಗಲಾಟೆ ನಡೆದಿದೆ. ಗಾಯಾಳು ರಾಜು ತಳವಾರ, ಸುದೇಶ ಲಾಠೆ ಎಂಬುವವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲು ತೂರಾಟವಾಗಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಖಡೆ ಬಜಾರ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೀಡುಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಹಿಂದೂ ಕಾರ್ಟಿಕ ಸಮುದಾಯದ ಕೆಲವರಿಂದ ಜಾಗ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದ್ದು, ಅದನ್ನು ತೆರವು ಮಾಡಬೇಕು ಎಂದು ಗಣಾಚಾರಿ ಸಮಾಜದ ಯುವಕರು ಆಗ್ರಹಿಸಿದ್ದಾರೆ.
ಒತ್ತುವರಿ ಜಾಗ ಗುರುತಿಸಲು ಬಂದಿದ್ದಾಗ ಮಾತು ಮಾತಿಗೆ ಬೆಳೆದ ಗಲಾಟೆ ಆರಂಭವಾಗಿದೆ. ಈ ವೇಳೆ ಎರಡೂ ಸಮುದಾಯಗಳ ಜನರಿಂದ ಪರಸ್ಪರ ಕಲ್ಲುತೂರಾಟ ನಡೆದಿದೆ ಎಂದು ತಿಳಿದುಬಂದಿದೆ.