ಮೊಳಕಾಲ್ಮೂರು :ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳು ಭೂಮಿ ಪೂಜೆ. ಮತ್ತು ಪಟ್ಟಣದ ಕಲ್ಗೂಡ ಮೋಹಲದಲ್ಲಿ 4 ಲಕ್ಷ ವೆಚ್ಚದ ಪಿರಲ ದೇವಸ್ಥಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಭೇಟಿ..
ತಾಲ್ಲೂಕಿನ ರಾಂಪುರ ಗ್ರಾಮ ಹಾಗೂ ನಾಗಸಮುದ್ರ ಗ್ರಾಮಗಳಲ್ಲಿ ಸೂಶ್ರುಕಿಯರ ಕಟ್ಟದ ನಿರ್ಮಾಣ ಮಾಡಲು ಸುಮಾರು 1ಕೋಟಿ ವೆಚ್ಚದಲ್ಲಿ ಎನ್ ವೈ ಗೋಪಾಲ ಕೃಷ್ಣರವರು ಭೂಮಿ ಪೂಜೆ ನೆರವೇರಿಸಿದರು.
ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ 2024-25ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಟಾನವತಿಯಿಂದ ಮೊಳಕಾಲ್ಮುರು ತಾಲ್ಲೂಕು ರಾಂಪುರ ಗ್ರಾಮದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಶುಶ್ರುಷಕಿಯರ ವಸತಿ ಗೃಹ ನಿರ್ಮಾಣ ಕಾಮಗಾರಿ 50 ಲಕ್ಷ ಹಾಗೂ ನಾಗಸಮುದ್ರ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರ ಆವರಣ ಶುಶ್ರುಷಕಿಯರ ವಸತಿ ಗೃಹದ ಕಾಮಗಾರಿ 50 ಲಕ್ಷ ಹಾಗೂ ರ್ಯಾಜೆನಹಳ್ಳಿಯಲ್ಲಿ 13ಲಕ್ಷ ವೆಚ್ಚದ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು.
ಪಟ್ಟಣದ ಕಲಗೋಡು ಮೊಹಲ್ಲಾ ದಲ್ಲಿ ಪಿರಲ ದೇವಸ್ಥಾನಕ್ಕೆ 4ಲಕ್ಷದ ವೆಚ್ಚದಲ್ಲಿ ಕಾಮಗಾರಿ ಪೂರ್ಣ ಗೊಳಿಸಲಾಯಿತು.
ಸಂದರ್ಭದಲ್ಲಿ ಗುತ್ತಿಗೆದಾರರಾದ ಎಸ್ ಖಾದರ್, ಪಪ ಸದಸ್ಯರು ಅಬ್ದುಲ್, ಮುಸ್ಲಿಂ ಬಾಂಧವ್ಯರಾದ ಜೊಲ್ಲು ಬಾಯ್, ಸುಹೈಲ್ ಹಾರನ್, ಹಾರಿಫುಲ್ಲ, ಪಸಿಹುಲ್ಲ ಇಸ್ಮಾಯಿಲ್ ಆಯುಬ್, ಅಮಾನ್, ಅಬ್ದುಲ್ಲ, ಇನ್ನು ಹಲವರು ಮತ್ತು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ವರದಿ: ಪಿಎಂ ಗಂಗಾಧರ