Ad imageAd image

ಜನ ಔಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರದ ವಿರುದ್ದ ಬಿಜೆಪಿ ವತಿಯಿಂದ ಪ್ರತಿಭಟನೆ

Bharath Vaibhav
ಜನ ಔಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರದ ವಿರುದ್ದ  ಬಿಜೆಪಿ ವತಿಯಿಂದ  ಪ್ರತಿಭಟನೆ
WhatsApp Group Join Now
Telegram Group Join Now

ಇಲಕಲ್ : ಜನ ಔಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರದ ವಿರುದ್ದ ಹುನಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ.

ಇಳಕಲ್ ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಹುನಗುಂದ ಮತಕ್ಷೇತ್ರದಿಂದ ಹಮ್ಮಿಕೊಂಡ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರಕಾರದ ನಿರ್ದಾರದ ವಿರುದ್ದ ಹಮ್ಮಿಕೊಂಡು ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ಮಾಡಲಾಯಿತು.

ಪ್ರಧಾನ ಮಂತ್ರಿ ಜನ ಔಷಧಿ ಯೋಜನೆಯನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ರಾಷ್ಟçದ ಬಡ, ಕೆಳವರ್ಗ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಂತ ಕಾಳಜಿ ಹಾಗೂ ದೂರದರಷ್ಟಿಯಂದ ಜಾರಿಗೊಳಿದ್ದಾರೆ, ಆದರೆ ಕರ್ನಾಟಕ ಸರ್ಕಾರವು ಜನ ಔಷಧಿ ಕೇಂದ್ರಗಳನ್ನು ಮುಚ್ಚುವ ತಿರ್ಮಾನ ತೆಗೆದುಕೋಂಡಿರುವುದು ದುರದುಷ್ಟಕರ ಸಂಗತಿ, ಕೂಡಲೆ ರಾಜ್ಯ ಸರಕಾರ ಮುಚ್ಚುವ ನಿರ್ಧಾರದ ಆದೇಶವನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಪಕ್ಷದ ಮುಖಂಡರು ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಶ್ರೀ ಅರವಿಂದ ಮಂಗಳೂರ ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಗುರಂ ಶ್ರೀಮತಿ ಶೋಭಾ ಆಮದಿಹಾಳ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಡಾ ಮಲ್ಲಿಕಾರ್ಜುನ ಗಡಿಯನ್ನನವರ ಪಕ್ಷದ ಮುಖಂಡರಾದ ಶ್ರೀ ಶ್ಯಾಮಸುಂದರ್ ಕರವಾ ಶ್ರೀ ಅಜ್ಜಪ್ಪ ನಾಡಗೌಡ ಶ್ರೀ ಬಸಪ್ಪ ಹೋಸೂರ ಶ್ರೀ ಪ್ರಕಾಶ ಪಾಟೀಲ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಏಕಬೋಟೆ ಶ್ರೀ ಸೂಗುರೇಶ ನಾಗಲೋಟಿ ನಗರಸಭೆ ಸದಸ್ಯರಾದ ಶ್ರೀ ವಿಜಯ ಗಿರಡ್ಡಿ ಯುವ ಮುಖಂಡರಾದ ಶ್ರೀ ಮಲ್ಲಿಕಾರ್ಜುನ ಚೂರಿ ಶ್ರೀ ರಾಜೇಂದ್ರ ಆರಿ ಶ್ರೀ ಉಮೇಶ ಕೊಂಗಾರಿ ಶ್ರೀ ಚಿದಾನಂದ ಚಿನ್ನಾಪುರಶ್ರೀ ಪರಶುರಾಮ ಬಿಸಲದಿನ್ನಿ‌ ಕು. ತೃಪ್ತಿ ಸಾಲಿಮಠ ಶ್ರೀ ನಾಗೇಶ ಗಂಜಿಹಾಳ ಶ್ರೀ ಚಂದ್ರಶೇಖರ ಹೂಗಾರ ಶ್ರೀ ಕಪಿಲ್ ಪವಾರ ಶ್ರೀ ಶ್ರೀನಿವಾಸ ಕೊಪ್ಪಳ ಶ್ರೀ ವಿಜಯ ಜಾಲಗಾರ ಶ್ರೀ ಮಲ್ಲು ಕುಂಬಾರ ಶ್ರೀ ಶಿವರಾಜ ಹಾವರಗಿ ಶ್ರೀ ವಿರೇಶ ಮನ್ನಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!