ತೆಕ್ಕಲಕೋಟೆ : ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿಂಧೋಳು ಕಾಲೋನಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಎಸ್ ಆನಂದ ವಿದ್ಯಾರ್ಥಿಗಳಿಗೆ ಪೆನ್ನು ಪುಸ್ತಕಗಳನ್ನು ವಿತರಿಸಿದರು. ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಬಾಲಪ್ಪ, ದೊಡ್ಡ ಪರಮೇಶ್ವರ, ನೇಣಿಕಿ ಶೇಖಪ್ಪ, ನಸರುದ್ದೀನ್, ರಂಜಾನ್ ಸಲಾಫೀ. ಸುಂಕಣ್ಣ.ನೀಲಕಂಠ ಡಿ. ಸಿರುಗುಪ್ಪ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಗ್ರಹಾರ ಗೋವಿಂದ, ಉಪಾಧ್ಯಕ್ಷ ತಳವಾರ ದೊಡ್ಡ ಶೇಕಣ್ಣ, ಜಿಲ್ಲಾಪ್ರಧಾನ ಕಾರ್ಯದರ್ಶಿ ಅಜರುದ್ದೀನ್. ಬ್ಲಾಕ್ ಅಧ್ಯಕ್ಷರಾದ ತಿಮ್ಮಪ್ಪ ಬಿ. ಎಂ ಭೀಮೇಶ.ಎಸ್ ಸಿದ್ದೇಶ್ ಶಾಲಾ ಮುಖ್ಯ ಗುರು ಉಸ್ಮಾನ್ ಪಟೇಲ್ . ಶಿಕ್ಷಕರಾದ ಹಂಪಣ್ಣ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸ ನಾಯ್ಕ