ಚಿಕ್ಕೋಡಿ:– (ಎಸ್ ಡಿ ಪಿ ಐ) ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕೋಡಿ ಜಿಲ್ಲಾ ಸಮೀತಿ ವತಿಯಿಂದ ಇವತ್ತು ಅಕ್ಟೋಬರ್ 2 ಗಾಂಧಿ ಜಯಂತಿ ಹಾಗೂ ಚಿಕ್ಕೋಡಿ ಪೌರಕಾರ್ಮಿಕ ದಿನಾಚರಣೆಯನ್ನು ಆಚರಿಸಿ ಪೌರ ಕಾರ್ಮಿಕರನ್ನು ಸತ್ಕರಿಸಿ ಸಮಾರಂಭಿಸಲಾಯಿತು.

ಈ ಪಕ್ಷದ ಮುಖ್ಯ ಉದ್ದೇಶ ಹಸಿವು ಮುಕ್ತ ಸ್ವಾತಂತ್ರ್ಯ ಭಯಮುಕ್ತ ಸ್ವಾತಂತ್ರ್ಯ ಯoಬುವ ನುಡಿಯನ್ನು ಎತ್ತಿಕೊಂಡು ಇವರು ಎಲ್ಲರ ಜೊತೆ ಜೊತೆಯಲಿ ಸರಿ ಸಮಾನ ಮತ್ತು ಸಹಾಯ ಸಹಕಾರದಿಂದ ನಡೆದುಕೊಳ್ಳುವುದರ ಬಗ್ಗೆ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಕಾರ್ಯಕ್ರಮದ ಅತಿಥಿಯಾದ ಮಿಲನ್ ಕಾಂಬಳೆ, ಎಸ್ ಡಿ ಪಿ ಐ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮೌಜಮಾಜ ಮುಲ್ಲಾನಿ ಇವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪತ್ರಿಕಾ ಮಾಧ್ಯಮದವರನ್ನು ಸ್ವಾಗತಿಸಿ ಸತ್ಕರಿಸಲಾಯಿತು.ನಂತರ ಸಿಹಿ ಮತ್ತು ಬಾಳೆಹಣ್ಣು ಹಂಚಿ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಈ ಕಾರ್ಯಕ್ರಮದ ಸಂದರ್ಭದಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ ಜಾಕೀರ್ ನಾಯಿಕವಾಡಿ, ಚಿಕ್ಕೋಡಿ ವಿಧಾನಸಭೆ ಕಾರ್ಯದರ್ಶಿ ರಾಜೇಖಾನ್ ಮುಕಾಶಿ, ಉಪಾಧ್ಯಕ್ಷ ವಾಸಿಂ ಪಟೇಲ್, ಆದಿಲ್ ಮುಲ್ಲಾ, ಅಶ್ಫಾಕ್ ಪಟೇಲ್ ಮತ್ತು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು
ವರದಿ :-ರಾಜು ಮುಂಡೆ




