ಬೆಳಗಾವಿ : ಇಂದು ಜಿಲ್ಲೆಯ ಕನ್ನಡ ಭವನದಲ್ಲಿ ಆಯೋಜಿಸಿದ್ದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಛತ್ರಪತಿ ಶಿವಾಜಿ ಮಹಾರಾಜ್ ಕೇವಲ ಮರಾಠಿಗರಿಗೆ ಮಾತ್ರ ಸೀಮಿತವಲ್ಲ ಎಂದಿದ್ದಾರೆ.
ಸಾಹಿತಿ ಸರಜೂ ಕಾಟ್ಕರ್ ಅವರು ರಚಿಸಿರುವ ಛತ್ರಪತಿ ಶಿವಾಜಿ ‘ದಿ ಗ್ರೇಟ್ ಮರಾಠ’ ಪುಸ್ತಕವನ್ನು ಇಂದು ಸಚಿವ ಸತೀಶ್ ಜಾರಕಿಹೊಳಿ ಲೋಕಾರ್ಪಣೆಗೊಳಿಸಿ ಮಾತನಾಡುವ ವೇಳೆ ಶಿವಾಜಿ ಮಹಾರಾಜರನ್ನು ‘ದಿ ಗ್ರೇಟ್ ಮರಾಠ’ ಎನ್ನುವುದಕ್ಕಿಂತ, ‘ದಿ ಗ್ರೇಟ್ ಇಂಡಿಯನ್’ ಎನ್ನಬೇಕು ಎಂದಿದ್ದಾರೆ.
ಇದೇ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಮರಾಠರು ಮತ್ತು ಮುಸ್ಲಿಮರು ಸಹೋದರರಂತೆ ಇದ್ದರು.ಇನ್ನು ಶಿವಾಜಿ ಜತೆಗೆ ಹಿಂದೂಗಳಿಗಿಂತ ಮುಸ್ಲಿಮರೇ ಹೆಚ್ಚಿದ್ದರು.
ಶಿವಾಜಿ ರಕ್ಷಣೆಗೆ ನಿಂತವರೇ ಮುಸ್ಲಿಮರು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.ಹೀಗಾಗಿ ಶಿವಾಜಿ, ಬಸವಣ್ಣ ಮತ್ತು ಅಂಬೇಡ್ಕರ್ಯಾವುದೇ ಒಂದೇ ಸಮುದಾಯಕ್ಕೆ ಸೀಮಿತರಾದವರಲ್ಲ ಎಂದಿದ್ದಾರೆ.
ಇನ್ನು ಈ ಪುಸ್ತಕದ ಲೇಖಕರಾದ ಸರಜೂ ಕಾಟ್ಕರ್ ಮಾತನಾಡಿ ಶಿವಾಜಿ ಅವರ ಸಂಪೂರ್ಣ ಚರಿತ್ರೆ ಬರೆಯುವುದು ನನ್ನ ಕನಸಾಗಿತ್ತು. ಈ ಕೃತಿಯ ಮೂಲಕ ಈಗ ಅದು ಸಾಕಾರಗೊಂಡಿದೆ ಎಂದು ಹೇಳಿದ್ದಾರೆ.