ಬೆಳಗಾವಿ: ಕನ್ನೇರಿ ಮಠದ ಕಾಡ ಸಿದ್ಧೇಶ್ವರ ಸ್ವಾಮಿಗಳಿಗೆ ರಾಜ್ಯದ ಕೆಲ ಜಿಲ್ಲೆಗಳ ಪ್ರವೇಶಕ್ಕೆ ನಿರ್ಭಂಧ ಹೇರಿರುವ ರಾಜ್ಯ ಸರಕಾರದ ಕ್ರಮವನ್ನು ಜಿಲ್ಲೆಯ ಶಿವಾಪುರದ ಕಾಡ ಸಿದ್ದೇಶ್ವರ ಮಠದ ಮೌನ ಕಾಡ ಸಿದ್ದೇಶ್ವರ ಸ್ವಾಮಿಗಳು ಕಟುವಾಗಿ ಖಂಡಿಸಿದ್ದಾರೆ.
ಈ ಕುರಿತು ಮಂಗಳವಾರ ಬಿವಿ-5 ನ್ಯೂಜ್ ನೊಂದಿಗೆ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂಗಳಲ್ಲಿನ ಒಗ್ಗಟ್ಟನ್ನು ಮುರಿದು ಹಾಕಲು ಸಂಚು ರೂಪಿಸಿದೆ ಎಂದು ಶ್ರೀಗಳು ಆರೋಪಿಸಿದರು. ಈ ಸರಕಾರ ಬಂದ ಮೇಲೆ ಹಿಂದೂಗಳ ಮೇಲಿನ ದೌರ್ಜನ್ಯ ಮೀತಿ ಮೀರಿದೆ ಎಂದು ಮೌನ ಕಾಡಸಿದ್ದೇಶ್ವರ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.
ಕಾಡ ಸಿದ್ದೇಶ್ವರ ಸ್ವಾಮಿಗಳ ವಿರುದ್ಧ ಪ್ರತಿಭಟಿಸುತ್ತಿರುವವರು ಅದೆಷ್ಟು ಜನ ಬಸವ ತತ್ವ ಪಾಲಿಸುತ್ತಿದ್ದಾರೆಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಲಿ ಎಂದು ಪ್ರಶ್ನೆ ಮಾಡಿದ ಶ್ರೀಗಳು ಪ್ರತಿಭಟನೆ ಸಂದರ್ಭದಲ್ಲಿ ಮಹಾನ್ ಗುರುಗಳ ಪ್ರತಿಕ್ರತಿಗೆ ಪಾದರಕ್ಷೆಯಿಂದ ಹೊಡೆಯುತ್ತಿರುವವರು ದೊಡ್ಡ ಪಾಪಿಗಳು ಎಂದು ಶ್ರೀಗಳು ಖಾರವಾಗಿ ನುಡಿದರು.
ಈ ಸಂದರ್ಭದಲ್ಲಿ ಮಠಾಧೀಶರು ಮೌನ ಮುರಿದು ಗುರುಗಳ ಪರವಾಗಿ ನಿಲ್ಲಬೇಕು. ಪ್ರತಿಭಟನೆ ಹೋರಾಟಗಳನ್ನು ಮಾಡಬೇಕು ಎಂದು ಮೌನ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.




