ಹಾರೂಗೇರಿ ಪೊಲೀಸ್ ಠಾಣೆಯ ಮುಂದೆ ತಂದೆಯ ಶವ ವಿಟ್ಟು ಪ್ರತಿಭಟನೆ ನಡೆಸಿದ ಸಿಪಿಐ ಅಶೋಕ್ ಸದಲಿಗಿ
ಹಾರೂಗೇರಿ: ಪಿಎಸ್ಐ ಮಾಳಪ್ಪ ಪೂಜೇರಿ ಜನವರಿ 10-2025ರಂದು ಠಾಣೆಗೆ ಆಗಮಿಸಿದ ಅಣ್ಣಪ್ಪ ಸಂಕಪ್ಪ ಸದಲಗಿ ಕಿರುಕುಳ ಆರೋಪ ಹಿನ್ನೆಲೆ ಮನನೊಂದ ವ್ಯಕ್ತಿ ಒಬ್ಬರು ಬೆಳಗಾವಿ KLE ಆಸ್ಪತ್ರೆಯಲ್ಲಿ ಸಾವುಗಿಡಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮೃತ ವ್ಯಕ್ತಿಯ ಮೃತದೇಹ ನೇರವಾಗಿ ಹಾರೂಗೇರಿ ಪೊಲೀಸ್ ಠಾಣೆಗೆ ತಡರಾತ್ರಿ ತಂದು ಪಿಎಸ್ಐ ಮಾಳಪ್ಪ ಪೂಜೇರಿ ವಿರುದ್ಧ ಘೋಷಣೆ ಕೂಗುತ್ತಾ ಪೊಲೀಸ್ ಠಾಣೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಅಣ್ಣಪ್ಪ ಸಂಕಪ್ಪ ಸದಲಗಿ 78 ವರ್ಷದ ಮೃತ ವ್ಯಕ್ತಿ.
ಸಿವಿಲ್ ವಿಷಯಕ್ಕೆ 78 ವರ್ಷದ ವ್ಯಕ್ತಿ ಅಣ್ಣಪ್ಪ ಸದಲಗಿಗೆ ಸುಮಾರು ದಿನಗಳಿಂದ ಕಿರುಕುಳ ನೀಡುತಿದ್ದರು ಎಂದು ಆರೋಪ ಹಿನ್ನೆಲೆ ಹಾರೂಗೇರಿ ಪೊಲೀಸ್ ಠಾಣೆ ಮುಂದೆ ಮೃತದೇಹ ವಿಟ್ಟು ಪಿಎಸ್ಐ ಮಾಳಪ್ಪ ಪೂಜೇರಿ ವಿರುದ್ಧ ಪ್ರತಿಭಟನೆ ನಡೆಸಿದರು
ಅಚ್ಚರಿ ವಿಷಯವೇನೆಂದರೆ ಮೃತ್ ವ್ಯಕ್ತಿಯ ಮಗ ಕೂಡಾ ವಿಜಯಪುರ ಜಿಲ್ಲೆಯ ದೇವದುರ್ಗದ ಠಾಣೆಯ ಸಿಪಿಐ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದು
ಈ ಪೊಲೀಸ್ ಇಲಾಖೆಯಲ್ಲಿಯೇ ಈ ತರ ಕಿರುಕುಳ ನಡೆದಿದ್ದು ಯಾರೋ ಒಬ್ಬರು ಮಾಡಿದ ತಪ್ಪಿಗೆ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ.
ಇನ್ನೂ ಪರಿಸ್ಥಿತಿ ತಿಳಿಗೊಳಿಸಲು ಚಿಕ್ಕೋಡಿ ವಿಭಾಗದ, dysp ಸಿಪಿಐ, ಪಿಎಸ್ಐ ಸ್ಥಳದಲ್ಲೇ ಹಾಜರು ಇದ್ದರು ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.
ವರದಿ :ಅಜಯ ಕಾಂಬಳೆ