ಸೇಡಂ: ಸೇಡಂ, ಕಲಬುರಗಿ ರಸ್ತೆಯಲ್ಲಿ ಲಾರಿಗಳು ಮಾಲೀಕರು ನಿಗಿಸುವದರಿಂದ ಸ್ಥಳೀಯ ಸಾರ್ವಜನಿಕರಿಗೆ ಗ್ರಾಮಗಳ ಜನರಿಗೆ ಇನ್ನೂ ಅವಶ್ಯಕವಾಗಿ ತೊಂದರೆ ನೀಡದಂತೆ ಲಾರಿ ಮಾಲೀಕರಿಗೆ ಸಿಪಿಐ ಮಹಾದೇವಪ್ಪ ದಿಡ್ಡಿಮನಿ ಖಡಕ್ ಎಚ್ಚರಿಕೆ ನೀಡಿದರು.
ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಲಾರಿ ಮಾಲೀಕರ ಹಾಗೂ ಡ್ರೈವರ್ ಗಳ ಸಭೆಯಲ್ಲಿ ಮಾತನಾಡಿದ ಸಿಪಿಐ ಅವರು ಲಾರಿ ಮಾಲೀಕರು ಲಾರಿಗೆ ಸಂಬಂಧಪಟ್ಟಂತಹ ದಾಖಲಾತಿಗಳ ಜೊತೆಗೆ ಲಾರಿ ನಡೆಸುವ ಡ್ರೈವರ್ ಕೂಡ ಅವರ ದಾಖಲಾತಿಗಳು ಸಂಪೂರ್ಣವಾಗಿ ಅವರ ಬಳಿಯೇ ಇರಬೇಕು ಎಂದು ಮಾಹಿತಿ ನೀಡಿದರು. ಒಂದು ವೇಳೆ ದಾಖಲಾತಿಗಳು ಇಲ್ಲದಿದ್ದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿಎಸ್ಐ ಸಂಗಮೇಶ್ ಅಂಗಡಿ, ಪೊಲೀಸ್ ಸಿಬ್ಬಂದಿ ಮಲ್ಕಪ್ಪ, ಹಾಗೂ ಲಾರಿ ಮಾಲೀಕರು, ಡ್ರೈವರ್ ಗಳು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್