ಹುಬ್ಬಳ್ಳಿ : ದಲಿತ ಸಿಎಂ ಮಾಡಿದರೆ ಬಹಳ ಸಂತೋಷ. ಆದರೆ ಇದನ್ನು ಹಾದಿ ಬೀದಿಯಲ್ಲಿ ಮಾತನಾಡಿರುವುದು ಸರಿಯಲ್ಲ ಕಾಂಗ್ರೆಸ್ ನಲ್ಲಿ ಬಹಳ ಗೊಂದಲ ಇದೆ ಇದೊಂದು ರಾಜ್ಯ ಹೋಗುತೆಂದು ಮ್ಯಾನೇಜ್ ಮಾಡುತ್ತಿದ್ದಾರೆ. ದಲಿತ ಸಿಎಂ ಆಗಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವರು ಅಧಿಕಾರ ಹಂಚಿಕೆ ಬಗ್ಗೆಯೂ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಸೀರಿಯಸ್ ರಾಜಕಾರಣಿ ಅಲ್ಲ. ಪ್ರತಿಭಟನೆ ಮಾಡೋದು ನಂತರ ವಿದೇಶಕ್ಕೆ ಹೋಗೋದು.
ರಾಹುಲ್ ಬರೀ ಅದಾನಿ, ಅಂಬಾನಿ ಬಗ್ಗೆ ಮಾತನಾಡುವುದೇ ಆಗಿದೆ ಇನ್ನು ಎಷ್ಟು ವರ್ಷ ಅವರ ಬಗ್ಗೆ ಮಾತಾಡುತ್ತೀರಿ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.
ಸಿದ್ದರಾಮಯ್ಯ ಬೇಕೊ ಬೇಡವೋ ಎಂದು ಅವರ ಪಕ್ಷ ತೀರ್ಮಾನಿಸಲಿ. ಆದರೆ ಸರಿಯಾದ ರೀತಿ ಆಡಳಿತ ಕೊಡಲಿ. ಈಗ ಯಾಕೆ ಸಿದ್ದರಾಮಯ್ಯ ನಿವೃತ್ತಿಯ ಬಗ್ಗೆ ಚರ್ಚೆ? ಸಿದ್ದರಾಮಯ್ಯ ನಿವೃತ್ತಿ ಆಗುತ್ತಾರೋ ಅಥವಾ ಇರುತ್ತಾರೋ ಡಿಕೆ ಸಿಎಂ ಆಗುತ್ತಾರೋ ಇದೆಲ್ಲ ಇವಾಗ ಯಾಕೆ ಚರ್ಚೆ? ದಲಿತ ಸಿಎಂ ಕೂಗು ಎದ್ದಿದೆ ಆಡಳಿತದಲ್ಲಿ ಗೊಂದಲ ಇದೆ ಮೊದಲು ಗೊಂದಲ ಸರಿಪಡಿಸಿ ಎಂದು ತಿಳಿಸಿದರು.