Ad imageAd image

” ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಅವರ ನೇತೃತ್ವದಲ್ಲಿ ಇತಿಹಾಸದ ದಾಖಲೆಯ ಮಹಾರುದ್ರ ಯಜ್ಞ

Bharath Vaibhav
” ದಾಸರಹಳ್ಳಿ ಶಾಸಕ ಎಸ್ ಮುನಿರಾಜು ಅವರ ನೇತೃತ್ವದಲ್ಲಿ ಇತಿಹಾಸದ ದಾಖಲೆಯ ಮಹಾರುದ್ರ ಯಜ್ಞ
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ರಾಜಧಾನಿಯ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ ಪ್ರಪ್ರಥಮ ಬಾರಿಗೆ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರ ಧರ್ಮಪತ್ನಿ ಶ್ರೀಮತಿ ಸುಜಾತ ಮುನಿರಾಜು ಅವರ ಅಧ್ಯಕ್ಷತೆಯಲ್ಲಿ ಹಾಗೂ ನೇತೃತ್ವದಲ್ಲಿ ಮಹಾ ರುದ್ರ ಕಿರಾತ ಮೂರ್ತಿ ಯಜ್ಞವು ನಿರಂತರವಾಗಿ ಆರು ಗಂಟೆಗಳ ಕಾಲ ಇಪ್ಪತ್ತು ನಾಲ್ಕು ಸಾವಿರದ ಎಂಟು ತೆಂಗಿನ ಕಾಯಿಗಳು ಒಡೆಯುವ ಮೂಲಕ ಇತಿಹಾಸದ ದಾಖಲೆಗೆ ಹೆಸರಾಯಿತು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡಿನ ಡಾ. ಬಾಲಗಂಗಾಧರ ಮಹಾಸ್ವಾಮಿಗಳ ರಂಗ ಮಂದಿರದಲ್ಲಿ(ಎಂಇಐ ಆಟದ ಮೈದಾನದಲ್ಲಿ) ರೀಫ್ ಫೌಂಡೇಷನ್ ಹಾಗೂ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅವರು ಈ ಭವ್ಯ ಕಾರ್ಯ ಕ್ರಮವನ್ನು ಕೇರಳದಿಂದ ಬಂದಿದ್ದ ನೂರಾರು ಹೆಚ್ಚಿನ ಸೇವಾಕರ್ತರು, ಅರ್ಚಕರು ದೈವತ್ವದಿಗಳು ನೆರವೇರಿಸಿ ಕೊಟ್ಟು ಯಜ್ಞಯ ವಿಶೇಷ ಏನೆಂದರೆ ಎಕೈಕ ವ್ಯಕ್ತಿ ಆರುವರೆ ಗಂಟೆ ನಿರಂತರವಾಗಿ ತನ್ನ ಎರಡು ಕೈಗಳಿಂದ ೨೪೦೦೮ ತೆಂಗಿನ ಕಾಯಿಗಳನ್ನು ಒಡೆದ ದೃಶ್ಯ ಬೆಂಗಳೂರಿನ ಜನರಿಗೆ ದಾಸರಹಳ್ಳಿ ಕಡೆಗೆ ಗಮನ ಸೆಳೆಯುವ ಹಾಗೆ ಮಾಡಿತ್ತು. ಸಾವಿರಾರು ಜನ ಭಕ್ತಿ ಭಾವದಿಂದ ಯಜ್ಞದಲ್ಲಿ ಭಾಗವಹಿಸಿ ಪೂರ್ಣಾಹುತಿ ಬಳಿಕ ಸರ್ವರಿಗೂ ಅನ್ನ ಸಂತರ್ಪಣೆ ಯಜ್ಞಯ ಕುಂಕುಮ, ಪ್ರಸಾದ ಹಂಚಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ರಾಮಚಂದ್ರ ಗೌಡ, ಶಾಸಕ ಎಸ್ ಮುನಿರಾಜು, ಸೂರಜ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಬಿಜೆಪಿ ಹಿರಿಯ ಮಹಿಳಾ ಮುಖ್ಯಸ್ಥೆ ಸುಜಾತ ಮುನಿರಾಜು, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಚಂದ್ರಶೇಖರ್, ನಾಗಣ್ಣ,ರಾಜಣ್ಣ ಹೆಗ್ಗನಹಳ್ಳಿ, ಸೌಂದರ್ಯ ಭಾರತ್, ಮಲ್ಲಿಕಾರ್ಜುನ್, ಗುತ್ತಿಗೆದಾರ ಮಹಾದೇವ ರೆಡ್ಡಿ, ವಿನೋದ್ ಗೌಡ, ಆರಾಧ್ಯ ಸೇರಿದಂತೆ ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
Share This Article
error: Content is protected !!