ಬಾದಾಮಿ ಸುದ್ದಿ;-ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ನಕಲಿ ಜಾತಿ ಪ್ರಮಾಣದ ಚರ್ಚೆ,ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಕುರಿತು ಕ್ರಮ ಜರುಗಿಸಲು ಆಗ್ರಹ,ತಹಶೀಲ್ದಾರರಿಗೆ ಮನವಿ ನೀಡಿದ ವಾಲ್ಮೀಕಿ ಸಮಾಜದ ಮುಖಂಡರ ಮನವಿ,ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮಾಡಿದರೂ ನ್ಯಾಯವಿಲ್ಲ.
ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕ ಪಟ್ಟಣದ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ 2024 ರ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವ ಭಾವಿ ಸಭೆಯಲ್ಲಿ ಜಿಲ್ಲೆಯಲ್ಲಿ ನೀಡಿದ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಕುರಿತು, ಬಾದಾಮಿ ತಾಲೂಕ ವಾಲ್ಮೀಕಿ ಸಮಾಜದ ಅಧ್ಯಕ್ಷರು, ಪಧಾಧಿಕಾರಿಗಳು, ಸಮಾಜದ ಮುಖಂಡರು, ಹಿರಿಯರು, ಯುವಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಕುರಿತು. ಮೊದಲು ನಮಗೆ ನ್ಯಾಯ ಸಿಗಬೇಕು.ಜಿಲ್ಲಾ ಆಡಳಿತ ಭವನದ ಮುಂದೆ ಹೋರಾಟ ಮಾಡಿದರೂ ಯಾವುದೇ ಕ್ರಮ ಆಗಿಲ್ಲಾ ಎಂದು ನೇರ ಆರೋಪ ಮಾಡಿದರು.ನಮ್ಮ ಸಮಾಜದ ಸಮಸ್ಯೆ ಗಳನ್ನು ಮೊದಲು ಪರಿಹಾರ ನಿಡಿ ನಂತರ ಜಯಂತಿಯ ವಿಷಯ ಕುರಿತು ಚರ್ಚೆ ಮಾಡೋಣ ಎಂದು ಮನವಿ ನೀಡಿ ವಾಲ್ಮೀಕಿ ಜಯಂತಿಯ ಪೂರ್ವ ಭಾವಿ ಸಭೆಯನ್ನು ತಡೆ ಹಿಡಿದರು.
ವರದಿ:- ಎಸ್ ಎಸ್ ಕವಲಾಪುರಿ