ಹುಕ್ಕೇರಿ:-ದಿನಾಂಕ 3-10-2024ರಂದು ಗುರುವಾರ ದುರ್ಗಾ ಮಾತಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು 9 ದಿನ ಕಾರ್ಯಕ್ರಮವಾಗಿದ್ದು ಸಭೆಯಲ್ಲಿ ಹಿಂದು ಮುಸ್ಲಿಂ ಮುಖಂಡರು ಭಾಗವಹಿಸಿದರು.
ದಸರಾ ಹಬ್ಬದ ಸಭೆಯನ್ನು ಸಿ. ಪಿ. ಐ ಮಹಾಂತೇಶ ಬಸಾಪುರೆ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು ಯಾವುದೇ ಅಹಿತಕರ ಘಟನೆ ಆಗದಂತೆ 9 ದಿನದ ದಸರಾ ಹಬ್ಬವನ್ನು ಆಚರಣೆ ಮಾಡಬೇಕು.

ದೇವಿ ಮಾತಾಯನ್ನು ಜಾಗ್ರತೆಯಿಂದ ಪ್ರತಷ್ಠಾಪನೆ ಮಾಡಿಕೊಳ್ಳಬೇಕು ಎಲ್ಲರೂ ದುರ್ಗಾ ಮಾತಾ ಯುವಕ ಮಂಡಳ ವತಿಯವರು ಜಾಗ್ರತೆ ವಹಿಸಿಕೊಳ್ಳಬೇಕು ಎಲ್ಲರು ಶಾಂತಿ ಯುತವಾಗಿ ದುರ್ಗಾ ಮಾತಾ ಹಬ್ಬವನ್ನು ಆಚರಿಸಿಕೊಳ್ಳಿ ಯಾವುದೇ ತಮಗೂ ಹಾಗೂ ಸಾರ್ವಜನಿಕರಿಗೂ ತೊಂದರೆ ಆಗದ ಹಾಗೆ ಹಬ್ಬವನ್ನು ಆಚರಿಸಿ ಎಂದು ಸಭೆಯಲ್ಲಿ ಸಿ. ಪಿ. ಐ ಮಹಾಂತೇಶ ಬಸಾಪುರೆ,ಹಾಗೂ ಉದಯ ಹುಕ್ಕೇರಿ,ಶಿವರಾಜ ನಾಯಕ, ರಾಜು ಮುನ್ನೊಳಿ ಹಿರಿಯ ಮುಸ್ಲಿಂ ಮುಖಂಡರಾದ ಮೊಮಿನಿ ದಾದಾ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ನೂತನ ಅಧ್ಯಕ್ಷರಾದ ಇಮ್ರಾನ್ ಮೊಮೀನ್, ಬಹುಸಾಬ್ ಪಾಂಡ್ರೆ, ರಮೇಶ ಹುಂಜಿ, ಮಹಾವೀರ ನೀಲಜಗಿ, ಬಸವರಾಜ ನಾಯಕ, ಸುಭಾಸ ನಾಯಕ ಹಾಗೂ ಹಿಂದೂ ಮತ್ತು ಮುಸ್ಲಿಂ ಮುಖಂಡರು ಹಾಗೂ ದುರ್ಗಾ ಮಾತಾ ಯುವಕ ಮಂಡಳ ಹಳ್ಳದಕೇರಿ ಮುಖಂಡರು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೆಶಗೋಳ




