ಮೊಳಕಾಲ್ಮುರು: ರಾಂಪುರ ಗ್ರಾಮದಲ್ಲಿ ಗುರುವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆ ನಡೆಯಿತು.
ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಅನ್ನ ಭಾಗ್ಯ ಯೋಜನೆಡಿ ಬಿಪಿಎಲ್ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎನ್ ವೈ ಪಿ ಚೇತನ್ ಚಾಲನೆ ನೀಡಿ ಮಾತನಾಡಿದರು.
ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಆಶಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜುಲೈ 9, 2023 ರಂದು ಅನ್ನಭಾಗ್ಯ ಯೋಜನೆಯನ್ನು ಗ್ರಾರಂಟಿ ಯೋಜನೆಯಾಗಿ ಪ್ರಾರಂಭಿಸಿತು. ಈ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಗೆ ಹಣ ನೀಡಲಾಗುತಿತ್ತು.
ಪ್ರಸ್ತುತ ಫಲಾನುಭವಿಗಳಿಗೆ 10 ಕೇಜಿ ಅಕ್ಕಿಯನ್ನು ನೀಡಲಾಗುತ್ತಿದೆ.ಇದು ಒಂದು ನಿರ್ಣಾಯಕ ಹೆಜ್ಜೆಯಾಗಿದ್ದು, ಯಾವುದೇ ಕುಟುಂಬವು ಹಸಿವಿನಿಂದ ಬಳಲಬಾರದು ಎಂಬ ಗುರಿಯನ್ನು ಹೊಂದಲಾಗಿದೆ.ಈ ಯೋಜನೆಯು ಕರ್ನಾಟಕದ ಎಲ್ಲಾ ಬಿಪಿಎಲ್ ಕುಟುಂಬಗಳನ್ನು ತಲುಪುತ್ತದೆ, ಇದರಿಂದಾಗಿ ಬಡವರ ತಮ್ಮ ಹಸಿವು ನೀಗಿಸಿಕೊಳ್ಳ ಸಾಧ್ಯವಾಗಿದೆ.
ಅನ್ನ ಭಾಗ್ಯ ಯೋಜನೆಯು ಅಪೌಷ್ಟಿಕತೆಯನ್ನು ದೂರ ಮಾಡಿದಂತೆ ಆಗುತ್ತದೆ, ಸಿದ್ದರಾಮಯ್ಯನವರ ಸರ್ಕಾರ ಸದಾ ಬಡವರ ಪರ ಕಾಳಜಿ ಇರುವ ಸರ್ಕಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನುಷ್ಠಾನ ಸಮಿತಿ ಸದಸ್ಯರಾದ ಪಲ್ಲವಿ,ನರಸಿಂಹರೆಡ್ಡಿ, ಬಾಂಡ್ರಾವಿ ಇಸ್ಮಾಯಿಲ್ ಹೊನ್ನೂರಪ್ಪ,ಮೊಹಮ್ಮದ್ ರಫೀ, ಟಿ ಎಸ್ ಪಾಲಯ್ಯ ಸೇರಿದಂತೆ ಹಲವರಿದ್ದರು.