Ad imageAd image

ಗಾಂಧಿ ಜಯಂತಿ ಪ್ರಯಕ್ತ ಚರಕಾ ಪಯಣ ಕಾರ್ಯಕ್ರಮ

Bharath Vaibhav
ಗಾಂಧಿ ಜಯಂತಿ ಪ್ರಯಕ್ತ ಚರಕಾ ಪಯಣ ಕಾರ್ಯಕ್ರಮ
WhatsApp Group Join Now
Telegram Group Join Now

ರಾಮದುರ್ಗ;-ಬೆಳಗಾವಿ ಜಿಲ್ಲೆ ರಾಮದುರ್ಗ ಘಟಕ ಹಾಗೂ ನಾಟ್ಯ ಯೋಗ ಟ್ರಸ್ಟ್ ಸಾಲಾಪುರ ಇವರ ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 2 ರಾಮದುರ್ಗದಲ್ಲಿ ಹಮ್ಮಿಕೊಂಡ ಚರಕಾ ಪಯಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಸ್ ಎಂ ಸಕ್ರಿ ನಿಕಟ ಪೂರ್ವ ತಾಲೂಕಾ ಕಸಾಪ ಅಧ್ಯಕ್ಷರು ಮಾತನಾಡಿದರು.

ಗಾಂಧೀಜಿ ತತ್ವಗಳು ಇಂದಿನ ಜನಾಂಗಕ್ಕೆ ಮಾರ್ಗದರ್ಶಿಯಾಗಿವೆ. ಶಾಂತಿ ಅಹಿಂಸೆ ಸತ್ಯಾಗ್ರಹ ಮಂತ್ರಗಳೊಂದಿಗೆ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಇವರು ಭಾರತದ ಹಳ್ಳಿಗಳಲ್ಲಿ ಗುಡಿ ಕೈಗಾರಿಕೆ ಉಳಿಸಲು ಚರಾಕಾದಿಂದ ನೂಲು ತೆಗೆದು ಬಟ್ಟೆ ನೆಯುವದನ್ನು ತಾವೇ ಮೊದಲು ಆರಂಭಿಸಿದರು ಅದು ಇಂದಿಗೂ ಸಹಿತ ಸುಮಾರು ಜನರು ಬಟ್ಟೆ ನೆಯುವದರ ಮೂಲಕ ಇಂದಿಗೂ ಸಹಿತ ಜೀವನ ನಡೆಸುತ್ತಾರೆ ಪ್ರೇರಕವಾಗಿದೆ.

ಅತಿಥಿಗಳಾದ ರಾಜಶೇಖರ ಶೆಲವಡಿ ಮಾತನಾಡುತ್ತ ಗುಡಿಕೈಗಾರಿಕೆ ಗ್ರಾಮೀಣಾಭಿವೃದ್ಧಿ ಸರ್ವೋದಯ ಸಮನ್ವಯ ತತ್ವಗಳು ಇಂದು ನಮಗೆ ದಾರಿದೀಪವಾಗಿದೆ ಯಾವುದೇ ಹಿಂಸೆ ಇಲ್ಲದೆ ಬ್ರಿಟಿಷರ ವಿರುದ್ಧ ಹೋರಾಡಿ ಶಾಂತಿಯಿಂದ ಸ್ವಾತಂತ್ರ್ಯ ಗಳಿಸಿಕೊಟ್ಟ ಗಾಂಧೀಜಿಯವರು ಸರ್ವ ಧರ್ಮಗಳ ಐಕ್ಯತೆಯ ಪ್ರತೀಕವಾಗಿರುವ ಮಹಾತ್ಮರು ಎಂದು ಹೇಳಿದರು.

ಸಮುದಾಯ ರಾಮದುರ್ಗ ಘಟಕದ ಅಧ್ಯಕ್ಷರಾದ ಆರ್ ಎಂ ಮೂಲಿಮನಿ ಮಾತನಾಡುತ್ತಾ ಜಗತ್ತಿಗೆ ಶಾಂತಿ ಮಂತ್ರ ನೀಡಿದ ಗಾಂಧಿಯವರು ಗ್ರಾಮೀಣ ಬಡ ದೀನ ದಲಿತರ ನಿರ್ಗತಿಕರ ಧ್ವನಿಯಾಗಿ ಅವರ ಅಭಿವೃದ್ಧಿಯೇ ದೇಶದ ಅಭಿವದ್ಧಿ ಎಂದು ಪ್ರತಿಪಾದಿಸಿದವರು ಗಾಂಧೀಜಿ ಎಂದರು.

ಲಾಲ್ ಸಾಹೇಬ್ ನದಾಫ ಹಾಗೂ ಸಂಗಡಿಗರು ಚರಕಾದ ಹುಟ್ಟು ಹಾಗೂ ಬೆಳೆದ ಬಂದ ದಾರಿಯನ್ನು ಮಕ್ಕಳಿಗೆ ವಿವರವಾಗಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.ಕಲಾ ತಂಡದವರು ಗೀತೆಗಳನ್ನು ಪ್ರಸ್ತುತ ಪಡಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಿಮ್ಮಣ್ಣ ಬಂಡಿವಡ್ಡರ ಶಾಲಾ ಪ್ರಧಾನ ಗುರುಗಳು ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಕೆ ವಾಯ್ ಪಾಟೀಲ ಐ ಪಿ ಮುಳ್ಳೂರು ಸಿ ಆರ್ ಪಿಗಳಾದ ಬಿ ಯು ಬೈರಕದಾರ ಬಿ ಎ ಹರಿಜನ ಶಾಲಾ ಶಿಕ್ಷಕರು ಶಿಕ್ಷಕೀಯರು ಉಪಸ್ಥಿತರಿದ್ದರು ಎಸ್ ಎಂ ಕಲ್ಲೂರ ಕಾರ್ಯಕ್ರಮ ನಿರೂಪಿಸಿದರು ಕಲ್ಲಪ್ಪ ಪೂಜೇರ ಸ್ವಾಗತಿಸಿದರು ಎಸ್ ಎಂ ಸೊರಟಿ ವಂದಿಸಿದರು. ಶಾಲಾ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು

ವರದಿ:-ಮಂಜುನಾಥ ಕಲಾದಗಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!