ವಿಶ್ವ ಮಟ್ಟದಲ್ಲಿ ಕುಂದಾನಗರಿ ಕೀರ್ತಿ ಹೆಚ್ಚಿಸಿದ ವಿನೋದ ಮೇತ್ರಿ..
ಬೆಳಗಾವಿ : ಬೆಳಗಾವಿಯ ಮಣ್ಣಿನ ಮಕ್ಕಳು ಸಮಾಜದ ಹತ್ತು ಹಲವು ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿ, ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಅನೇಕ ನಿದರ್ಶನಗಳು ಇದ್ದು, ಈಗ ಬೆಳಗಾವಿಯ ಕುವರ ವಿನೋದ ಪುಂಡಲೀಕ ಮೇತ್ರಿ ಮತ್ತೊಮ್ಮೆ ಬೆಳಗಾವಿಯ ಹೆಸರನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದ್ದಾರೆ.
ಮೇ ತಿಂಗಳ 10 ರಿಂದ 13ರವರೆಗೆ ಥಾಯ್ಲೆಂಡಿನ ಪಠಾಯಾ ನಗರದಲ್ಲಿ ಜರುಗಿದ ಮಿಸ್ಟರ್ ಗ್ಯಾಲಕ್ಸಿ ವರ್ಡ್ ಬಾಡಿ ಬಿಲ್ಡಿಂಗ್ ಕಾಂಪಿಟೇಶನನಲ್ಲಿ ನಮ್ಮ ಬೆಳಗಾವಿಯ ವಿನೋದ ಪುಂಡಲೀಕ ಮೇತ್ರಿ ಅವರು 60 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಸಾಧನೆಗೈದು ನಗರಕ್ಕೆ ಆಗಮಿಸಿದ ವಿನೋದ ಮೇತ್ರಿ ಅವರಿಗೆ ಡಾ ಬಾಬಾಸಾಹೇಬ ಅಂಬೇಡ್ಕರ ಅವರ ಪ್ರತಿಮೆಯ ಎದುರಿಗೆ ಗೌರವದ ಸತ್ಕಾರ ಜರುಗಿದ್ದು, ಸತ್ಕಾರ ಕಾರ್ಯದಲ್ಲಿ ಸಮಾಜದ ಪ್ರಮುಖರಾದ ಮಲ್ಲೇಶ್ ಚೌಗಲೆ, ರಮಾಕಾಂತ ಕೊಂಡುಸ್ಕರ್, ಸಂಜಯ ಸುಂಟಕರ, ಸುಬ್ರಹ್ಮಣ್ಯ ಕಾಂಬಳೆ, ಸುದೀರ್ ಚೌಗಲೆ, ಆಕಾಶ್ ಹಲಗೇಕರ ಮತ್ತಿತರರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ