ಹಟ್ಟಿ ಚಿನ್ನದ ಗಣಿ : ಹಟ್ಟಿ ಚಿನ್ನದ ಗಣಿ ಪಟ್ಟಣದ ರಾಮ್ ರಹೀಮ್ ಕಾಲೋನಿಯ ನಿವಾಸಿ 11 ವರ್ಷದ ಬಾಲಕಿಯನ್ನು ಮಧ್ಯಾಹ್ನ ಸಮಯದಲ್ಲಿ ಚಾಕಲೇಟ್ ಕೊಡುವೆ ಎಂದು ತನ್ನ ಮನೆಗೆ ಕರೆದುಕೊಂಡು ಹೋಗಿ ಬಾಲಕಿಯನ್ನು ಅತ್ಯಾಚಾರಕ್ಕೆ ಪ್ರಯತ್ನ ಪಟ್ಟ ಎನ್ನಲಾಗುತ್ತಿದೆ ಪುಟ್ಟ ಬಾಲಕಿ ಅವನು ಕರೆದುಕೊಂಡು ಹೋದ ಮನೆಯಿಂದ ಚಿರಾಟ ನಡೆಸಿದಾಗ ಪಕ್ಕದ ಮನೆಯವರು ಸಂಶಯಪಟ್ಟು ಸ್ಥಳೀಯರಿಗೆ ತಿಳಿಸಿದಾಗ ಕೂಡಲೇ ಅವರು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಸಮಯ ಪ್ರಜ್ಞೆಯಿಂದ ಮಗುವನ್ನು ರಕ್ಷಿಸಲಾಗಿದೆ ಆರೋಪಿ ಚಂದ್ರಶೇಖರ್ ಯಲ್ಲಪ್ಪ ವಡ್ಡರ್ ಮಲ್ಲಾಪುರ್ 43 ವರ್ಷ ಎಂಬುವತನನ್ನು ಬಂಧಿಸಲಾಗಿದೆ ನಂತರ ಶಾಲಾ ಶಿಕ್ಷಕಿ ಮತ್ತು ಮುಖ್ಯ ಗುರುಗಳು ನೀಡಿದ ದೂರಿನ ಅನ್ವಯ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ