ಛತ್ತೀಸ್‌ಗಢ: ಲೈಂಗಿಕ ದೌರ್ಜನ್ಯ ವಿಚಾರವಾಗಿ ಛತ್ತೀಸ್ ಗಢ ಹೈ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. ಅಸಹಜ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಹೆಂಡ್ತಿಯ ಜತೆ ಗಂಡ ಅಸಹಜ ಅಥವಾ ಬಲವಂತದ ಲೈಂಗಿಕ ಕ್ರಿಯೆ ನಡೆಸಬಹುದು. ಪತ್ನಿ ಲೈಂಗಿಕ ಕ್ರಿಯೆಗೆ ಸಮ್ಮತಿ ಸೂಚಿಸದಿದ್ದರೆ ಬಲವಂತವಾಗಿ ಆಕೆಯ ಜತೆ ಲೈಂಗಿಕ ಕ್ರಿಯೆ ನಡೆಸಲು ಗಂಡನಿಗೆ ಅವಕಾಶವಿದೆ ಎಂದು ಹೇಳಿದೆ.
ಅಸಹಜ ಲೈಂಗಿಕ ಕ್ರಿಯೆ ಯಿಂದ ಮಹಿಳೆಯೊಬ್ಬಳು ಪ್ರಾಣಬಿಟ್ಟಿದ್ದಾರೆ ಎಂಬ ಆರೋಪ ಇತ್ತು. ಈ ಬಗ್ಗೆ ಹೈ ಕೋರ್ಟ್ ನಲ್ಲಿ ವಿಚಾರಣೆ ಕೂಡ ನಡೆಯುತ್ತಿತ್ತು. ಸಮಗ್ರವಾಗಿ ವಾದ -ಪ್ರತಿವಾದವನ್ನು ಆಲಿಸಿದ ಕೋರ್ಟ್ ಈ ಮಹತ್ವದ ಆದೇಶವನ್ನು ಹೊರಡಿಸಿದೆ.