Ad imageAd image

ಪೋಷಕರಿಂದ ತೀವ್ರ ವಿರೋಧದ ಮಧ್ಯೆ ಹಿಂದೂ – ಮುಸ್ಲಿಂ ಜೋಡಿ ಪ್ರೇಮ ವಿವಾಹ 

Bharath Vaibhav
ಪೋಷಕರಿಂದ ತೀವ್ರ ವಿರೋಧದ ಮಧ್ಯೆ ಹಿಂದೂ – ಮುಸ್ಲಿಂ ಜೋಡಿ ಪ್ರೇಮ ವಿವಾಹ 
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ : ಪೋಷಕರಿಂದ ತೀವ್ರ ವಿರೋಧದ ನಡುವೆಯೂ ಹಿಂದೂ ಯುವಕನನ್ನು ಮುಸ್ಲಿಂ ಯುವತಿಯೋರ್ವರು ಮದುವೆಯಾಗುವ ಮೂಲಕ ಜೋಡಿಯೊಂದು ಹೊಸ ಜೀವನಕ್ಕೆ ಕಾಲಿಟ್ಟಿರುವ ಘಟನೆ ವರದಿಯಾಗಿದೆ.

ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಜ್ಮಾ ಮತ್ತು ಹರೀಶ್ ಬಾಬು ಎಂಬುವವರು ದೇಗುಲದಲ್ಲಿ ವಿವಾಹವಾಗಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆಗಮಿಸಿ ರಕ್ಷಣೆ ಕೋರಿ ಮನವಿ ಮಾಡಿದ್ದಾರೆ.

ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇಶ್ವರ ಗ್ರಾಮದ ನಜ್ಮಾ, ಚಿಕ್ಕಬಳ್ಳಾಪುರ ತಾಲೂಕಿನ ಯಾಪಲಹಳ್ಳಿಯ ಹರೀಶ್ ಇಬ್ಬರೂ ಪರಸ್ಪರ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಹರೀಶ್ ಜೊತೆ ಮದುವೆಗೆ ನಜ್ಮಾ ಅವರ ಪೋಷಕರಿಂದ ವಿರೋಧವಿತ್ತು ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನವೊಂದರಲ್ಲಿ ಮದುವೆಯಾಗಿ, ಬಳಿಕ ಎಸ್ಪಿ ಕಚೇರಿ ಬಂದು ವಿವರಣೆ ನಿಡಿದ್ದಾರೆ. ಈ ಸಂಬಂಧದ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ಎಸ್ಪಿ ಪ್ರಕರಣ ವರ್ಗಾಯಿಸಿದ್ದಾರೆ.

ಅಲ್ಲದೇ ಪತಿ ಹರೀಶ್​ ಜೊತೆ ಹೋಗುವುದಾಗಿ ನಜ್ಮಾ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಲಿಖಿತ ಹೇಳಿಕೆಯನ್ನೂ ದಾಖಲಿಸಿದ್ದಾರೆ. ದಂಪತಿಗೆ ಯಾವುದೇ ತೊಂದರೆ ನೀಡದಂತೆಯೂ ಪೊಲೀಸರು ನಜ್ಮಾ ಅವರ ಪೋಷಕರಿಗೆ ಠಾಣೆಗೆ ಕರೆಸಿ ಸೂಚನೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!