Ad imageAd image

ಸಶಕ್ತ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂಗಳು ಮೂರು ಮಕ್ಕಳನ್ನು ಹೆರಬೇಕು: ಡಾ. ಪ್ರವೀಣಭಾಯಿ ತೊಗಾಡಿಯಾ

Bharath Vaibhav
ಸಶಕ್ತ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂಗಳು ಮೂರು ಮಕ್ಕಳನ್ನು ಹೆರಬೇಕು: ಡಾ. ಪ್ರವೀಣಭಾಯಿ ತೊಗಾಡಿಯಾ
WhatsApp Group Join Now
Telegram Group Join Now

ಹುಬ್ಬಳ್ಳಿ: ಸಶಕ್ತ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂಗಳು ಮೂರು ಮಕ್ಕಳನ್ನು ಹೆರಬೇಕೆಂದು ಎಂದು ಕರೆ ನೀಡಿದ ಅಂತರರಾಷ್ಟೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ, ಮೂರನೇ ಮಗುವಿನ ಶೈಕ್ಷಣಿಕ ಜವಾಬ್ದಾರಿಯನ್ನು ಒರಿಷತ್ ವಹಿಸಿಕೊಳ್ಳುತ್ತದೆ ಎಂದು ಘಂಟಾಘೋಷವಾಗಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿ‌ದೂಗಳ ಸುರಕ್ಷತೆ ನಮ್ಮ ಮುಖ್ಯ ಧ್ಯೇಯ. ಹಿಙದೂಗಳ ಜನಸಂಖ್ಯೆ ಹೆಚ್ಚಿಸಬೇಕಿರುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬ ಹಿಂದೂ ದಂಪತಿ ಮೂರು ಮಕ್ಕಳನ್ನು ಹೆರಬೇಕು. ತೀನ್ ಬಚ್ಚೆ, ಹಿಂದೂ ಸಚ್ಚೆ; ಬಾಕಿ ಸಬ್ ಕಚ್ಚೆ ಎಂದು ಹೇಳಿದರು.

ಮೂರು ಮಕ್ಕಳನ್ನು ಹೆರುವ ಹಿಂದೂ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಜೊತೆಗೆ, ಮೂರನೇ ಮಗುವಿನ ಶೈಕ್ಷಣಿಕ ಜವಾಬ್ದಾರಿಯನ್ನು ಸಹ ನಾವೇ ಹೊರುತ್ತೇವೆ ಎಂದರು.

ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲ, ದೇಶದ ಎಲ್ಲ ರಾಜ್ಯಗಳಲ್ಲಿಯೂ ಸರ್ಕಾರ ಯಾವುದೇ ಇರಲಿ ಹಿಂದೂಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ ಎಂದ ತೊಗಾಡಿಯಾ, ‘ಪೆಹಲ್ಗಾಮ್, ಅಸ್ಸಾಂ, ಪಶ್ಚಿಮ ಬಂಗಾಲ ಸೇರಿದಂತೆ ವಿವಧೆಡೆ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳನ್ನು ಉದಾಹರಿಸಿದರು.

ಸಂವಿಧಾನದ ಭರವಸೆ, ಆಶಯದ ಮೇಲೆ ರಚಿತವಾದ ಸರ್ಕಾರ ಯಾವುದೇ ಪಕ್ಷವಾಗಿರಲಿ, ಹಿಂದೂಗಳ ರಕ್ಷಣೆ ವಿಷಯದಲ್ಲಿ ತಾರತಮ್ಯ ಮಾಡಬಾರದು. ರಾಜಕೀಯ, ರಾಜನೀತಿಯನ್ನು ಬದಿಗಿಟ್ಟು ಹಿಂದುಗಳ ರಕ್ಷಣೆಗೆ ಮುಂದಾಗಬೇಕು. ಹಿಂದೂಗಳ ಹಿತರಕ್ಷಣೆ, ಸುರಕ್ಷತೆಗಾಗಿ ಎಲ್ಲ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಕನಸು ನಿಮ್ಮದೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಭಾರತ ಹಿಂದೂ ರಾಷ್ಟ್ರವೇ ಆಗಿದೆ. ಆದರೆ, ಅದು ದೇಶದ ಜನತೆಯ ಅನುಭವಕ್ಕೆ ಬರುವಂತೆ ಮಾಡಬೇಕಾಗಿದೆ ಎಂದರು.

2014ರ ನಂತರದ ಭಾರತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ದೇಶವನ್ನು ರಾಜಕೀಯ ಪಕ್ಷಗಳಿಂದ ವಿಂಗಡಿಸಬಾರದು. 1947ರ ಸ್ವಾತಂತ್ರ್ಯಾನಂತರ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿ, ಮಹಾನ್ ಭಾರತ ಆಗುತ್ತಿದೆ. ಆರ್ಥಿಕತೆ, ತಂತ್ರಜ್ಞಾನದೊಂದಿಗೆ ಮುಂದುವರಿಯುತ್ತಿದೆ’ ಎಂದು ಹೇಳಿದರು.

ಪೆಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಆಪದರುರೇಷನ್ ಸಿಂಧೂರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪಾಕಿಸ್ತಾನದ ಗಡಿದಾಟಿ ಹೊಡೆದಿದ್ದು ಉತ್ತಮ. ಆದರೆ, ಇದು ಇನ್ನಷ್ಟು ಹೆಚ್ಚಾಗಿದ್ದರೆ ಹಿಂದೂಗಳು ಮತ್ತಷ್ಟು ಸಂತಸಗೊಳ್ಳುತ್ತಿದ್ದರು’ ಎಂದರು.

ಸಮೃದ್ಧ, ಸುರಕ್ಷಿತ, ಸನ್ಮಾನಿತ ಹಾಗೂ ಸ್ವಾಸ್ಥ್ಯ ಹಿಂದೂ ನನ್ನ ಸಂಕಲ್ಪ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ ಕಾರ್ಯ ನಿರ್ವಹಿಸುತ್ತಿದೆ‌. ದೌರ್ಜನ್ಯ ಸೇರಿದಂತೆ ಯಾವುದೇ ಸಮಸ್ಯೆಗೆ ಸಿಲುಕುವ ಹಿಂದುಗಳಿಗಾಗಿ, ದೇಶದಾದ್ಯಂತ ಸಹಾಯವಾಣಿ ಆರಂಭಿಸಲಾಗಿದೆ. ಆನ್‌ಲೈನ್ ಮೂಲಕವೂ ಸಮಸ್ಯೆ ಹೇಳಿಕೊಳ್ಳಬಹುದು. ಕಾನೂನು ನೆರವಿಗೆ ಅಡ್ವಕೇಟ್ ಹೆಲ್ಪ್‌ಲೈನ್ ಸಹ ಆರಂಭಿಸಲಾಗಿದೆ. ಸ್ವಾಸ್ಥ್ಯ ಹಿಂದೂಗಾಗಿ, 10 ಸಾವಿರ ಖಾಸಗಿ ಹಿಂದೂ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು.

ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
Share This Article
error: Content is protected !!