Ad imageAd image

ಹನಿಟ್ರ್ಯಾಪ್ ಖೆಡ್ಡಾ : ಪೊಲೀಸ್ ಕಾನ್ಸ್ ಟೇಬಲ್ ಸೇರಿ ಐವರು ಅರೆಸ್ಟ್ 

Bharath Vaibhav
ಹನಿಟ್ರ್ಯಾಪ್ ಖೆಡ್ಡಾ : ಪೊಲೀಸ್ ಕಾನ್ಸ್ ಟೇಬಲ್ ಸೇರಿ ಐವರು ಅರೆಸ್ಟ್ 
WhatsApp Group Join Now
Telegram Group Join Now

ಮೈಸೂರು: ಸುಂದರವಾದ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಹಣ ದೋಚುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹನಿಟ್ರ್ಯಾಪ್ ಜಾಲದಲ್ಲಿ ಭಾಗಿಯಾಗಿದ್ದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಠಾಣೆ ಕಾನ್ಸ್ ಟೇಬಲ್ ಶಿವಣ್ಣ, ಮೂರ್ತಿ ಸೇರಿಂದತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.ಸುಂದರವಾದ ಯುವತಿಯರನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾಡಿಸುತ್ತಿದ್ದ. ಕಂಪಲಾಪುರದ ಬಟ್ಟೆ ವ್ಯಾಪಾರಿ ದಿನೇಶ್ ಕುಮಾರ್ ಅವರನ್ನು ಖೆಡ್ಡಾಗೆ ಕೆಡವಿ ಬ್ಲ್ಯಾಕ್ ಮೇಲ್ ಮಾಡಿ ಹಣ ದೋಚಿದ್ದರು.

 

ಯುವತಿಯೊಬ್ಬಳು ದಿನೇಶ್ ಅವರ ಬಟ್ಟೆ ಅಂಗಡಿಗೆ ತೆರಳಿ ಪರಿಉಚಯ ಮಾಡಿಕೊಂಡಿದ್ದಳು.

ಬಳಿಕ ದಿನೇಶ್ ಕುಮಾರ್ ನಂಬರ್ ಪಡೆದು ವಾಟ್ಸಾಪ್ ಚಾಟಿಂಗ್ ಶುರು ಮಾಡಿದ್ದಳು. ಮನೆಯಲ್ಲಿ ಯಾರೂ ಇಲ್ಲ ಕಾಫಿಗೆ ಬನ್ನಿ ಎಂದು ಆಹ್ವಾನಿಸಿದ್ದಳು.

ಯುವತಿಯ ಮಾತಿಗೆ ಮರುಳಾದ ದಿನೇಶ್ ಕುಮಾರ್, ಆಕೆಯ ಮನೆಗೆ ಹೋಗಿದ್ದಾರೆ. ಯುವತಿ ಜೊತೆ ಮನೆಯಲ್ಲಿ ದಿನೇಶ್ ಇದ್ದಾಗ ಕಾನ್ಸ್ ಟೇಬಲ್ ಶಿವಣ್ಣ ಹಾಗೂ ಮೂರ್ತಿ ಮನೆಗೆ ನುಗ್ಗಿದ್ದಾರೆ. ದಿನೇಶ್ ಕುಮಾರ್ ಗೆ ಹಿಗ್ಗಾಮುಗ್ಗಾ ಥಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಘಟನೆ ಬಗ್ಗೆ ಹೊರಗೆ ಹೇಳಬಾರದು ಎಂದರೆ 10 ಲಕ್ಷ ರೂಪಾಯಿ ಹಣ ನೀಡಬೇಕು ಎಂದು ಹೆದರಿಸಿದ್ದಾರೆ. ಈಗ ಮರ್ಯಾದೆ ಹೋಗುತ್ತೆ ಎಂಬುದು ಗೊತ್ತಾಗಿ ಸಹೋದರನಿಗೆ ಹೇಳಿ ೧೦ ಲಕ್ಷ ರೂಪಾಯಿ ಹಣ ತರಿಸಿದ್ದರು.

ಇದ್ದಕ್ಕಿದ್ದಂತೆ 10 ಲಕ್ಷ ರೂಪಾಯಿ ತರುವಂತೆ ದಿನೇಶ್ ಹೇಳಲು ಕಾರಣವೇನಿರಬಹುದು? ಎಂದು ಸಹೋದರ ಅನುಮಾನಗೊಂಡಿದ್ದ. ಅಲ್ಲದೇ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಘಟನೆವ್ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಾನ್ಸ್ ಟೇಬಲ್ ಶಿವಣ್ಣ ಸೇರಿ ಐವರನ್ನು ಬಂಧಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!