ಮೈಸೂರು : 2025 ರ ಡಿಸೆಂಬರ್ ಗೆ ಸಿಎಂ ಸಿದ್ಧರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯುತ್ತಾರೆ. ಡಿಕೆಶಿ ಅಥವಾ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗ್ತಾರೆ ಅಂತ MLC ವಿಶ್ವನಾಥ್ ಭವಿಷ್ಯ ನುಡಿದಿದ್ದಾರೆ.
ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ನವೆಂಬರ್ ವೇಳೆಗೆ ರಾಜ್ಯ ರಾಜಕೀಯದಲ್ಲಿ ಹೊಸ ಮುಖ್ಯಮಂತ್ರಿ ಬರುತ್ತಾರೆ.ಕಾಂಗ್ರೆಸ್ ನಲ್ಲಿ ಗಣನೀಯ ಬದಲಾವಣೆ ಆಗುತ್ತದೆ ಎಂದು ಹೇಳಿದರು.
ಮುಂದಿನ ನವೆಂಬರ್ ಡಿಸೆಂಬರ್ ಗೆ ಸಿದ್ದರಾಮಯ್ಯ ಚೇಂಜ್ ಆಗ್ತಾರೆ.ಅದು ಹೇಗೆ ಜಾತಿಗಣತಿ ಮಾಡಿಸ್ತೀರಿ, ಮರುಜಾತಿಗಣತಿ ಮಾಡಿಸುವುದಿಲ್ಲ ಎಂದು ಹೈಕಮಾಂಡ್ ಗೆ ಹೇಳಿದ್ದರೇ ಸಿದ್ದರಾಮಯ್ಯ ಹೀರೋ ಆಗುತ್ತಿದ್ದರು.
ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದರು. ಮೂರು ತಿಂಗಳೊಳಗೆ ಜಾತಿಗಣತಿ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸುಮ್ಮನೇ ದೇವರಾಜ ಹೆಸರು ಹೇಳಬೇಡಿ.ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಸಿಎಂ ಸಿದ್ದರಾಮಯ್ಯ ಚರಿತ್ರೆಯಲ್ಲಿ ದಾಖಲಾಗುತ್ತಾರೆ ಎಂದು ವ್ಯಂಗ್ಯವಾಡಿದರು.