ಅಥಣಿ: ಪ್ರತಿ ಟನ್ ಕಬ್ಬಿಗೆ 3,500 ರೂ ದರ ನಿಗದಿಪಡಿಸಬೇಕು ಎಂದು ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಸಂಗೋಳ್ಳಿ ರಾಯಣ್ಣನ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಣೆ ಮಾಡಿದರು
ಅಥಣಿ ತಾಲೂಕಿನ ವಿವಿಧೆಡೆಯಿಂದ ಬಂದಿದ್ದ ರೈತರು, ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು
ರೈತರ ಸಂಘಟನೆ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಪ್ರೀತಿ ಪೂಜಾರಿ ಮಾತನಾಡಿದ ಅವರು ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 3,500 ನೀಡಬೇಕು ಎಂದು ಒತ್ತಾಯಿಸಿದ್ರು ಹಾಗೂ ಬೆಲೆ ನಿಗದಿ ಆಗುವವರೆಗೆ ನಿರಂತರ ಹೋರಾಟ ಮಾಡುತ್ತೇವೆ ಎಂದು ಹೇಳಿದರು . ಅದನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ತಾಲೂಕು ಕೇಂದ್ರದ ಮೂಲಕ ಹೋರಾಟ ಮಾಡುತ್ತಿದ್ದೇವೆ’ ಎಂದರು.
ನಮ್ಮ ಬೇಡಿಕೆಯಂತೆ ಕಾರ್ಖಾನೆ ಮಾಲಿಕರು ಕಬ್ಬಿಗೆ ದರ ನಿಗದಿಪಡಿಸಬೇಕು. ಬಳಿಕ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು’ ಎಂದು ಒತ್ತಡ ಹಾಕಿದರು
ಈ ಸಂದರ್ಭದಲ್ಲಿ ಗುರು ಮದನ್ನವರ.ಯಾದಪ್ಪ ನಂದೇಶ್ವರ.ಚನಗೌಡ ಇಮಗೌಡರ.ಭೀರಪ್ಪಾ ಈಚೇರಿ.ಪ್ರಕಾಶ ಪೂಜೇರಿ.ಶ್ರೀದೇವಿ ಪಾಟೀಲ್ ಸೇರಿದಂತೆ ನೂರಾರು ರೈತರು ರೈತ ಮಹಿಳೆಯರು ಬಾಗಿಯಾಗಿದ್ದರು.
ವರದಿ: ಸುಕುಮಾರ ಮಾದರ



