Ad imageAd image

ಇಸ್ರೇಲ್ – ಇರಾನ್ ಸಂಘರ್ಷ : ಲೈವ್ ನಲ್ಲಿಯೇ ಸ್ಟೂಡಿಯೋದ ಮೇಲೆ ದಾಳಿ 

Bharath Vaibhav
ಇಸ್ರೇಲ್ – ಇರಾನ್ ಸಂಘರ್ಷ : ಲೈವ್ ನಲ್ಲಿಯೇ ಸ್ಟೂಡಿಯೋದ ಮೇಲೆ ದಾಳಿ 
WhatsApp Group Join Now
Telegram Group Join Now

ತೆಹ್ರಾನ್‌: ಇಸ್ರೇಲ್ – ಇರಾನ್ ಸಂಘರ್ಷ ತೀವ್ರವಾಗಿದ್ದು, ಇರಾನ್ ಸ್ಟೇಟ್ ಟಿವಿ ಸ್ಟೂಡಿಯೋದ ಕಾಂಪೌಂಡ್‌ಗೆ ಕ್ಷಿಪಣಿ ದಾಳಿ ನಡೆದಿದೆ.

ನಿರೂಪಕಿ ಸುದ್ದಿ ವಾಚನ ಮಾಡುತ್ತಿದ್ದ ಸಂದರ್ಭದಲ್ಲಿಯೇ ದಾಳಿ ನಡೆದಿದ್ದು, ಈ ದೃಶ್ಯಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗಿವೆ.

ಇರಾನ್ ಸ್ಟೇಟ್ ಟಿವಿ ನಿರೂಪಕಿ ಸಹರ್ ಇಮಾಮಿ ಅವರು ಎಂದಿನಂತೆ ಸುದ್ದಿವಾಚನ ಮಾಡುತ್ತಿದ್ದರು. ಆ ವೇಳೆ ಇಸ್ರೇಲ್‌ನಿಂದ ಏಕಾಏಕಿ ಕ್ಷಿಪಣಿ ದಾಳಿಯಾಗಿ ಇಡೀ ಸ್ಟೂಡಿಯೋ ನಡುಗಿತು. ದಾಳಿಯಲ್ಲಿ ನಿರೂಪಕಿಗೆ ಯಾವುದೇ ಪ್ರಾಣಾಪಾಯಗಳಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇರಾನ್‌ ವಿರುದ್ಧದ ದಾಳಿಯನ್ನು ಸೋಮವಾರ ಮತ್ತಷ್ಟು ತೀವ್ರಗೊಳಿಸಿರುವ ಇಸ್ರೇಲ್‌ ವಾಯುಪಡೆ ಇರಾನ್‌ನ ವಿಶ್ವದ ಅತಿದೊಡ್ಡ ಅನಿಲ ಸಂಗ್ರಹಗಾರದ ಮೇಲೆ ದಾಳಿ ನಡೆಸಿದೆ. ಕೇಂದ್ರ ಇರಾನ್‌ನ 100 ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಏರ್‌ಸ್ಟ್ರೈಕ್‌ ನಡೆಸಿದೆ. ತೆಹ್ರಾನ್‌ನಲ್ಲಿ ಸ್ಫೋಟದ ಸದ್ದು ಕೇಳಿ ಬಂದಿವೆ.

ಇರಾನ್‌ನ ನಟಾಂಜ್‌, ಇಶ್ಫಹಾನ್‌, ಫೊರ್ಡೋವ್‌ ಅಣುಕೇಂದ್ರಗಳು ಇಸ್ರೇಲ್‌ ವಾಯು ದಾಳಿಯಲ್ಲಿಹಾನಿಗೀಡಾಗಿವೆ ಎಂದು ಹೇಳಲಾಗಿದೆ. ಆದರೆ, ವಿಕಿರಣದ ಸೋರಿಕೆ ಭೀತಿ ಇಲ್ಲಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ತಿಳಿಸಿದೆ.

ಇರಾನ್‌ ದಕ್ಷಿಣದಲ್ಲಿರುವ ಪಾರ್ಸ್‌ ತೈಲ ಹಾಗೂ ಅನಿಲ ಸಂಗ್ರಹಗಾರದ ಮೇಲೂ ದಾಳಿ ನಡೆಸಲಾಗಿದೆ. ಇಸ್ರೇಲ್‌ ದಾಳಿಯಿಂದ ಪಶ್ಚಿಮ ಏಷ್ಯಾದಲ್ಲಿಅನಿಲ ಹಾಗೂ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

”ಇರಾನ್‌ ವಾಯು ರಕ್ಷಣೆ ಹಾಗೂ ಕ್ಷಿಪಣಿ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗಿದೆ. ಪಶ್ಚಿಮ ಇರಾನ್‌ನಿಂದ ತೆಹ್ರಾನ್‌ವರೆಗಿನ ವಾಯು ಪ್ರದೇಶದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಾಗಿದೆ. ವೈಮಾನಿಕ ಕಾರ್ಯಾಚರಣೆ ಮೇಲೆ ಆಧಿಪತ್ಯ ಸಾಧಿಸಲಾಗಿದೆ,” ಎಂದು ಇಸ್ರೇಲ್‌ ಸೇನೆ ಹೇಳಿಕೊಂಡಿದೆ.

WhatsApp Group Join Now
Telegram Group Join Now
Share This Article
error: Content is protected !!